ಬೆಂಗಳೂರು: ಆರ್ ಟಿ ಒ ಕಚೇರಿಯಲ್ಲಿಯೇ ಕೋಟ್ಯಂತರ ರೂಪಾಯಿ ವಂಚನೆ ನಡೆದಿದ್ದು, ಐಷಾರಾಮಿ ಕಾರುಗಳ ತೆರಿಗೆ ಹಣ ಕಟ್ಟದೇ ಸರ್ಕಾರಕ್ಕೆ ಬರೋಬ್ಬರಿ 15 ಸಾವಿರ ಕೋಟಿ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.
ಕೋರಮಂಗಲದ ಆರ್ ಟಿಒ ಅಧಿಕಾರಿಗಳು ಕೋಟ್ಯಂತರ ರೂಪಾಯಿ ಹಣ ನುಂಗಿರುವ ಆರೋಪ ಕೇಳಿಬಂದಿದೆ. 1,471 ಐಷಾರಾಮಿ ಕಾರುಗಳ ತೆರಿಗೆ ಕಟ್ಟದೆಯೇ ಆರ್ ಟಿ ಒ ಅಧಿಕಾರಿಗಳು ಕಳ್ಳಾಟ ನಡೆಸಿದ್ದಾರೆ. 2015-21ರವರೆಗೆ ರಿಜಿಸ್ಟರ್ ಆಗಿರುವ ಐಷಾರಾಮಿ ಕಾರಿಗಳ ತೆರಿಗೆಯನ್ನೇ ಕಟ್ಟಿಲ್ಲ ಎನ್ನಲಾಗಿದ್ದೆ. ಕಾರುಗಳ ಮಾಲೀಕರು ಟ್ಯಾಕ್ಸ್ ಕಟ್ಟಿರುವ ಬಗ್ಗೆ ದಾಖಲೆಗಳೇ ಕಚೇರಿಯಿಂದ ನಾಪತ್ತೆಯಾಗಿದೆ.
ಈ ಸಂಬಂಧ ಹೆಚ್ ಎಸ್ ಆರ್ ಲೇಔಟ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದ್ದು, 1471 ಐಷಾರಾಮಿ ಕಾರು ಮಾಲೀಕರಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ.