ಚಿಕ್ಕಬಳ್ಳಾಪುರ: ಆರ್ ಟಿ ಒ ಕಚೇರಿಯ ಬೀಗ ಮುರಿದು, ಕಚೇರಿಯಲ್ಲಿದ್ದ ಮೂರು ಕಂಪ್ಯೂಟರ್ ಗಳನ್ನು ಕಳ್ಳರು ಕದ್ದೊಯ್ದ ಘಟನೆ ಚಿಕ್ಕಬಳ್ಳಾರದಲ್ಲಿ ನದೆದಿದೆ.
ಚಿಕ್ಕಬ್ಳ್ಳಾಪುರ ನಗರದ ಚಿತ್ರಾವತಿ ಬಳಿ ಇರುವ ಆರ್ ಟಿ ಒ ಕಚೇರುಯಲ್ಲಿ ಈ ಘಟನೆ ನಡೆದಿದೆ. ಕಚೇರಿ ಹಿಂಭಾಗಿಲಿನಿಂದ ಎಂಟ್ರಿ ಕೊಟ್ಟಿರುವ ಇಬ್ಬರು ಖದೀಮರು, ಕಚೇರಿ ಬೀಗ ಮುರಿದಿದ್ದಾರೆ. ಕಚೇರಿಯಲ್ಲಿದ್ದ ಕಂಪ್ಯೂಟರ್ ಗಳನ್ನು ಕದ್ದು ಪರಾರಿಯಾಗಿದ್ದಾರೆ.
ಕಚೇರಿಯಲ್ಲಿ ಇಬ್ಬರು ಹೋಂ ಗಾರ್ಡ್ ಗಳು ಭದ್ರತೆಗಾಗಿ ನಿಯೋಜಿಸಲ್ಪಟ್ಟಿದ್ದರು. ಆದರೆ ಹೋಂ ಗಾರ್ಡ್ ಗಳು ನಿದ್ದೆಗೆ ಜಾರಿದ್ದಾರೆ. ಇದರಿಂದ ಕಳ್ಳರು ಬಂದು ಕಂಪ್ಯೂಟರ್ ಕದ್ದೊಯ್ದಿರುವುದು ಗೊತ್ತಾಗಿಲ್ಲ. ಬೆಳಿಗ್ಗೆ ಕಚೇರಿ ಬಾಗಿಲು ತೆರೆಯುತ್ತಿದ್ದಂತೆ ಘಟನೆ ಬೆಳಕಿಗೆ ಬಂದಿದೆ.
ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.