ನವದೆಹಲಿ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿಗೆ ಬರಲಿದೆ. ಜೂನ್ 1ರಿಂದ ಆಯ್ದ ಖಾಸಗಿ ಕೇಂದ್ರಗಳಲ್ಲಿ ಡಿಎಲ್ ಪಡೆದುಕೊಳ್ಳಬಹುದು. ಈ ಮೂಲಕವ ವಾಹನ ಚಾಲನಾ ಪರವಾನಿಗೆ ಮಾಡಿಸಿಕೊಳ್ಳುವವರಿಗೆ ಸಿಹಿ ಸುದ್ದಿ ಸಿಕ್ಕಿದೆ.
ಜೂನ್ 1ರಿಂದ ಎಲ್ಎಲ್ಆರ್ ಮತ್ತು ಡಿಎಲ್ ಪಡೆಯಲು ಆರ್‌ಟಿಓ ಕಚೇರಿಗಳಿಗೆ ಹೋಗಬೇಕಿಲ್ಲ. ಸಮೀಪದ ನೋಂದಾಯಿತ ಖಾಸಗಿ ಚಾಲನಾ ಪರೀಕ್ಷಾ ಕೇಂದ್ರಗಳಲ್ಲಿಯೇ ಇಂತಹ ಸೇವೆ ಪಡೆದುಕೊಳ್ಳಬಹುದು. ಎಲ್ಎಲ್ಆರ್ ಮತ್ತು ಡಿಎಲ್ ಪಡೆಯುವ ಪ್ರಕ್ರಿಯೆಯನ್ನು ಸರಳ ಮತ್ತು ಶೀಘ್ರಗೊಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರದಿಂದ ಸಾರಿಗೆ ನೀತಿಯಲ್ಲಿ ಕೆಲವು ಬದಲಾವಣೆ ಮಾಡಲಾಗಿದೆ.
ಆರ್‌ಟಿಓ ಕಚೇರಿಗಳಲ್ಲಿ ಡಿಎಲ್ ಪಡೆಯಲು ಇರುವ ಜನರ ದಟ್ಟಣೆ ತಪ್ಪಿಸಲು ಕೇಂದ್ರ ಸರ್ಕಾರ ಹೊಸ ಕ್ರಮ ಜಾರಿಗೊಳಿಸಲಿದೆ. ಖಾಸಗಿಯವರಿಗೆ ಡಿಎಲ್ ಕೇಂದ್ರಗಳನ್ನು ತೆರೆಯಲು ಅನುಮತಿ ನೀಡಲಾಗುವುದು. ಎಲ್ಎಲ್ಆರ್ ಮತ್ತು ಡಿಎಲ್ ಗೆ ಅರ್ಜಿಯನ್ನು ಅರ್.ಟಿ.ಓ. ಕಚೇರಿಯಲ್ಲಿ ಸಲ್ಲಿಸಬೇಕು. ತಮಗೆ ಸಮೀಪದ ಖಾಸಗಿ ಡಿಎಲ್ ಕೇಂದ್ರದ ಹೆಸರು ಸೂಚಿಸಬೇಕು. ಆರ್‌ಟಿಓ ಕಚೇರಿ ಬಳಿ ಹೋಗಿ ವಾಹನ ಓಡಿಸಬೇಕಿಲ್ಲ. ಡ್ರೈವಿಂಗ್ ಲೈಸೆನ್ಸ್, ಲೈಸೆನ್ಸ್ ಪಡೆಯುವ ಪ್ರಕ್ರಿಯೆ ಖಾಸಗಿ ಕೇಂದ್ರದಲ್ಲಿಯೇ ಪೂರ್ಣಗೊಳ್ಳಲಿದೆ.