
ಚಿತ್ರದುರ್ಗ: ನವೆಂಬರ್ 30 ರಿಂದ ಡಿಸೆಂಬರ್ 5 ರ ವರೆಗೆ ಸಾರಿಗೆ ಕಚೇರಿಯಲ್ಲಿ ಸಕಾಲ ಸಪ್ತಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಾರಿಗೆ ಇಲಾಖೆಯ 27 ಸೇವೆಗಳು ಸಾರ್ವಜನಿಕರಿಗೆ ಸಕಾಲದಲ್ಲಿ ಲಭ್ಯವಿರುತ್ತವೆ.
ಕಲಿಕಾ ಲೈಸನ್ಸ್, ಚಾಲನಾ ಲೈಸನ್ಸ್ ಮತ್ತು ವಾಹನ ನೊಂದಣಿ ಹಾಗೂ ಸರಕು ವಾಹನ ರಹದಾರಿಗಳು ಇವುಗಳನ್ನು ಸಕಾಲ ವ್ಯಾಪ್ತಿಗೆ ಒಳಪಡಿಸಿದೆ. ಕಲಿಕಾ ಚಾಲನಾ ಲೈಸನ್ಸ್‍ಗಾಗಿ ಸಾರ್ವಜನಿಕರು ಆನ್‍ಲೈನ್ ಅರ್ಜಿ ಸಲ್ಲಿಸಬೇಕಾಗಿರುತ್ತದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಲು ಹಾಗೂ ಅನಧಿಕೃತ ವ್ಯಕ್ತಿಗಳನ್ನು ಸಂಪರ್ಕಿಸಬಾರದಾಗಿ ಈ ಮೂಲಕ ಮನವಿ ಮಾಡಲಾಗಿದೆ.
ಈ ಸಪ್ತಾಹದ ಅವಧಿಯಲ್ಲಿ ಆರ್‍ಟಿಒ ಕಚೇರಿಯಲ್ಲಿ ಸಕಾಲ ಸಹಾಯ ಕೇಂದ್ರ ತೆರೆಯಲಾಗಿದ್ದು, ಹೆಚ್ಚಿನ ಮಾಹಿತಿಯನ್ನು ಪಡೆಯಬಹುದಾಗಿರುತ್ತದೆ. ಈ ಸಪ್ತಾಹದ ಅವಧಿಯಲ್ಲಿ ಸಾರ್ವಜನಿಕರಿಗೆ ಪ್ರಶ್ನಾವಳಿ ಪತ್ರಿಕೆ ನೀಡಿ ಸಕಾಲದ ಬಗ್ಗೆ ಅವರ ಅನುಭವ ಹಂಚಿಕೊಳ್ಳಲು ಅವಕಾಶ ನೀಡಲಾಗಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ತಿಳಿಸಿದ್ದಾರೆ.