ಬೆಂಗಳೂರು: ಆರ್.ಟಿ.ಐ. ಕಾರ್ಯಕರ್ತರಿಗೆ ಶುಭ ಸುದ್ದಿ ಸಿಕ್ಕಿದೆ. ರಾಜ್ಯದಲ್ಲಿ ಇನ್ನು ಮುಂದೆ ಮಾಹಿತಿ ಹಕ್ಕು ಕಾಯ್ದೆಯಡಿ ಕೋರಿ ಅರ್ಜಿ ಸಲ್ಲಿಸುವಿಕೆ ಸಂಪೂರ್ಣ ಆನ್ಲೈನ್ ಆಗಲಿದೆ.
ಕರ್ನಾಟಕ ಮಾಹಿತಿ ಆಯೋಗವು ಸುಪ್ರೀಂಕೋರ್ಟ್ ನಿರ್ದೇಶನದಂತೆ ಆನ್ಲೈನ್ ಮೂಲಕ ಎರಡನೇ ಮೇಲ್ಮನವಿ ಸಲ್ಲಿಸಲು ಅವಕಾಶ ಕಲ್ಪಿಸಿದ್ದು, ಇದರಿಂದ ಪ್ರಯೋಜನವಾಗುವುದಿಲ್ಲ. ಮಾಹಿತಿ ಕೋರಿ ಸಲ್ಲಿಸಿದ್ದ ಮೂಲ ಅರ್ಜಿ, ಪ್ರಥಮ ಮೇಲ್ಮನವಿ ಆದೇಶ, ಮೊದಲಾದ ದಾಖಲೆಗಳನ್ನು ಅಪ್ಲೋಡ್ ಮಾಡಬೇಕಾಗಿದೆ. ಈ ಸಮಸ್ಯೆ ನಿವಾರಿಸಿ ಪ್ರಕ್ರಿಯೆ ಸರಳೀಕರಣಗೊಳಿಸಲು ಕರ್ನಾಟಕ ಮಾಹಿತಿ ಹಕ್ಕು ಆಯೋಗ ಕ್ರಮ ಕೈಗೊಂಡಿದೆ.
ಆರ್‌ಟಿಐ ಅಡಿ ಮಾಹಿತಿ ಕೋರಿ ಅರ್ಜಿ ಸಲ್ಲಿಸುವುದಕ್ಕೆ ಮೊದಲನೇ ಅರ್ಜಿ ಸೇರಿ ಎಲ್ಲವನ್ನು ಆನ್ಲೈನ್ ವ್ಯವಸ್ಥೆಗೆ ತರಲು ಕಾರ್ಯಕರ್ತರ ಬೇಡಿಕೆಯಂತೆ ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಸಮಯ, ಹಣ ಉಳಿತಾಯವಾಗಲಿದೆ.