ಬೆಂಗಳೂರು: ನಾಳೆಯಿಂದ ರಾಜ್ಯದಲ್ಲಿ ಶಿಕ್ಷಣ ಹಕ್ಕು ಕಾಯ್ದೆ(RTE)ಯಡಿ ಸೀಟುಗಳಿಗೆ ಅರ್ಜಿ ಸಲ್ಲಿಕೆ ಆರಂಭವಾಗಲಿದೆ.
2021 -22 ನೇ ಸಾಲಿನಲ್ಲಿ ನಿಗದಿತ ಖಾಸಗಿ ಶಾಲೆಗಳಲ್ಲಿ ಲಭ್ಯವಿರುವ ಶೇಕಡ 25 ರಷ್ಟು ಆರ್.ಟಿ.ಇ. ಮೀಸಲಾತಿ ಸೀಟುಗಳ ಪ್ರವೇಶಕ್ಕೆ ಮಾರ್ಚ್ 8 ರಿಂದ ಏಪ್ರಿಲ್ 8 ರವರೆಗೆ ಅರ್ಜಿ ಸಲ್ಲಿಸಬಹುದು. ಶಿಕ್ಷಣ ಇಲಾಖೆ ಆರ್.ಟಿ.ಇ. ಮೀಸಲಾತಿಯಡಿ ಸೀಟು ಗುರುತಿಸಿದ್ದು, http://school education.kar.nic.in ವೆಬ್ಸೈಟ್ನಲ್ಲಿ ಮಾಹಿತಿ ಪಡೆಯಬಹುದಾಗಿದೆ ಎಂದು ಹೇಳಲಾಗಿದೆ.