ಬೆಂಗಳೂರು: 2024 -25 ನೇ ಸಾಲಿನಲ್ಲಿ ಶಿಕ್ಷಣ ಹಕ್ಕು ಕಾಯ್ದೆಯಡಿ ಪ್ರವೇಶ ಪ್ರಕ್ರಿಯೆ ದಿನಾಂಕವನ್ನು ವಿಸ್ತರಿಸಲಾಗಿದೆ.
ಆರ್.ಟಿ.ಇ. ಪ್ರವೇಶ ಪ್ರಕ್ರಿಯೆ ನಡೆಸಲು ಸುತ್ತೋಲೆ ಅನ್ವಯ ಕ್ರಮ ವಹಿಸಲಾಗಿದ್ದು ಕಾರ್ಯಸೂಚಿ ಅನ್ವಯ ಆರ್‌ಟಿಇ ಅಡಿ ಮೊದಲ ಸುತ್ತಿನ ಆನ್ಲೈನ್ ಲಾಟರಿ ಪ್ರಕ್ರಿಯೆಯನ್ನು ಜೂನ್ 5 ರಂದು ನಡೆಸಲು ದಿನಾಂಕ ನಿಗದಿಪಡಿಸಲಾಗಿತ್ತು. ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಆರ್‌ಟಿಇ ಮೊದಲ ಸುತ್ತಿನ ಆನ್ಲೈನ್ ಲಾಟರಿ ಪ್ರಕ್ರಿಯೆಯನ್ನು ಮುಂದೂಡಲಾಗಿದ್ದು, ಜೂನ್ 7ರಂದು ನಡೆಸಲಾಗುವುದು. ಪರಿಷ್ಕೃತ ವೇಳಾಪಟ್ಟಿ ಕೆಳಗಿನಂತಿದೆ.
ಜೂನ್ 7 ರಂದು ಆನ್ಲೈನ್ ತಂತ್ರಾಂಶದ ಮೂಲಕ ಮೊದಲ ಸುತ್ತಿನ ಸೀಟು ಹಂಚಿಕೆ ನಡೆಯಲಿದೆ.
ಜೂನ್ 8 ರಿಂದ 19 ರವರೆಗೆ ಶಾಲೆಗಳಲ್ಲಿ ದಾಖಲಾತಿ ಪ್ರಾರಂಭ
ಜೂನ್ 8 ರಿಂದ 20 ರವರೆಗೆ ಮೊದಲ ಸುತ್ತಿನ ಶಾಲೆಗೆ ದಾಖಲಾದ ಮಕ್ಕಳ ವಿವರಗಳನ್ನು ತಂತ್ರಾಂಶದಲ್ಲಿ ಅಪ್ಲೋಡ್ ಮಾಡುವುದು
ಜೂನ್ 25 ರಂದು ಆನ್ಲೈನ್ ತಂತ್ರಾಂಶದ ಮೂಲಕ ಎರಡನೇ ಸುತ್ತಿನ ಸೀಟು ಹಂಚಿಕೆ ನಡೆಯಲಿದೆ.
ಜೂನ್ 26 ರಿಂದ ಜುಲೈ 2ರವರೆಗೆ ಎರಡನೇ ಸುತ್ತಿನಲ್ಲಿ ಹಂಚಿಕೆಯಾದ ಸೀಟುಗಳಿಗೆ ಶಾಲೆಗಳಲ್ಲಿ ದಾಖಲಾತಿ ನಡೆಯಲಿದೆ.
ಜೂನ್ 26 ರಿಂದ ಜುಲೈ 3ರವರೆಗೆ ಶಾಲೆಗಳಲ್ಲಿ ದಾಖಲಾದ ಎರಡನೇ ಸುತ್ತಿನ ಮಕ್ಕಳ ವಿವರಗಳನ್ನು ತಂತ್ರಾಂಶದಲ್ಲಿ ಅಳವಡಿಸಬೇಕಿದೆ.