ಬೆಂಗಳೂರು: ಆರ್.ಟಿ.ಇ. ಅಡಿ ಮಕ್ಕಳನ್ನು ಶಾಲೆಗೆ ಸೇರಿಸುವ ಪೋಷಕರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. 2022- 23ನೇ ಸಾಲಿಗೆ ಆರ್.ಟಿ.ಇ. ಮೂಲಕ ಪ್ರವೇಶ ಪ್ರಕ್ರಿಯೆ ಶಿಕ್ಷಣ ಇಲಾಖೆಯಿಂದ ಸಿದ್ಧತೆ ಕೈಗೊಳ್ಳಲಾಗಿದೆ.
ಮೊದಲ ಹಂತದಲ್ಲಿ ಶಾಲೆಗಳ ಮ್ಯಾಪಿಂಗ್ ಮಾಡಲಾಗುವುದು. ಗ್ರಾಮೀಣ ಪ್ರದೇಶದಲ್ಲಿ ಸಂಬಂಧಿಸಿದ ಕಂದಾಯ ಗ್ರಾಮದ ಭೌಗೋಳಿಕ ಗಡಿ, ನಗರಸಭೆ, ಮುನ್ಸಿಪಲ್ ಕೌನ್ಸಿಲ್, ಪಟ್ಟಣ ಪಂಚಾಯಿತಿ ಭೌಗೋಳಿಕ ಗಡಿ ಆಧಾರದ ಮೇಲೆ ಶಾಲೆಗಳನ್ನು ಗುರುತಿಸಲಾಗುವುದು.
ಶೇಕಡ 25 ರಷ್ಟು ಸೀಟುಗಳ ಹಂಚಿಕೆ ಮಾಡಲು ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳ ಮ್ಯಾಪಿಂಗ್ ಕಾರ್ಯ ಜನವರಿ 12ರ ಒಳಗೆ ಮುಗಿಸಲು ತಿಳಿಸಲಾಗಿದೆ. ಆರ್.ಟಿ.ಇ. ಪ್ರವೇಶ ಪ್ರಕ್ರಿಯೆ ಬಗ್ಗೆ ಸಿದ್ಧತೆ ಕುರಿತಾಗಿ ಚರ್ಚೆ ನಡೆಸಲು ಜನವರಿ 10 ರಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ಆರ್.ಟಿ.ಇ. ನೋಡಲ್ ಅಧಿಕಾರಿಗಳೊಂದಿಗೆ ಆನ್ಲೈನ್ ನಲ್ಲಿ ಸಭೆ ನಡೆಸಲಾಗುತ್ತದೆ. ರಾಜ್ಯ ಸರ್ಕಾರದಿಂದ ಉಚಿತ ಮತ್ತು ಕಡ್ಡಾಯ ಶಿಕ್ಷಣ ಯಶಸ್ವಿ ಅನುಷ್ಠಾನ ಪ್ರಗತಿಗೆ ನಿರ್ದೇಶನ ನೀಡಲು ಸಲಹಾ ಸಮಿತಿಯನ್ನು ಕೂಡ ರಚನೆ ಮಾಡಲಾಗಿದೆ.