ಪಹಣಿಯಲ್ಲಿ ತಪ್ಪಾದ ಹೆಸರನ್ನು ಸರಿಪಡಿಸುವುದರ ಬಗ್ಗೆ ರೈತರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಅದಕ್ಕಾಗಿ ಬೇಕಾದ ದಾಖಲೆಗಳು ಮತ್ತು ಹೆಸರು ಸರಿಪಡಿಸುವ ಪ್ರಕ್ರಿಯೆ ಬಗ್ಗೆ ತಿಳಿಯಲು ಮುಂದೆ ಓದಿ.
ಅಗತ್ಯವಿರುವ ದಾಖಲೆಗಳು:
ಆಧಾರ್ ಕಾರ್ಡ್
ಪಹಣಿ, ನೆಮ್ಮದಿ ಕೇಂದ್ರ/ತಹಶೀಲ್ದಾರ್ ಕಚೇರಿಯಲ್ಲಿ ಪಡೆಯಿರಿ
20 ರೂ. ಇ-ಸ್ಟ್ಯಾಂಪ್ ಪೇಪರ್(ಬಾಂಡ್ ಪೇಪರ್) ತೆಗೆದುಕೊಂಡು ಹೆಸರನ್ನು ಸರಿಪಡಿಸಲು ವಿವರಗಳನ್ನು ಭರ್ತಿ ಮಾಡಬೇಕು. ನಂತರ ನೋಟರೈಸೇಶನ್ ಅನ್ನು ವಕೀಲರಿಂದ ಮಾಡಿಸಬೇಕು.
ಪಹಣಿಯಲ್ಲಿನ ಹೆಸರು ತಿದ್ದುಪಡಿಗಾಗಿ ಮಾದರಿ ಅರ್ಜಿಯನ್ನು ಸಿದ್ಧಪಡಿಸಿ
RTC ಹೆಸರು ತಿದ್ದುಪಡಿ ಪ್ರಕ್ರಿಯೆ
ದಾಖಲೆಗಳೊಂದಿಗೆ ಭೂಮಿ ಕೇಂದ್ರಕ್ಕೆ ಅರ್ಜಿ ಸಲ್ಲಿಸಿ. ಭೂಮಿ ಕೇಂದ್ರವು ನೀವು ಸಲ್ಲಿಸಿದ ಅರ್ಜಿಯನ್ನು ಗ್ರಾಮ ಲೆಕ್ಕಾಧಿಕಾರಿಗೆ ರವಾನಿಸುತ್ತದೆ. ಸ್ವೀಕರಿಸಿದ ದಾಖಲೆಗಳನ್ನು ಪರಿಶೀಲಿಸಿ ದಾಖಲೆ ತಪ್ಪಾಗಿದ್ದರೆ ಅದನ್ನು ತಿರಸ್ಕರಿಸುತ್ತಾರೆ. ದಾಖಲೆಗಳು ಸರಿಯಾಗಿದ್ದರೆ ಪಹಣಿಯನ್ನ ಸರಿಪಡಿಸಲು ಭೂಮಿ ಕೇಂದ್ರಕ್ಕೆ ಆದೇಶಿಸುತ್ತಾರೆ..ಅವರ ಆದೇಶದ ಮೇರೆಗೆ, ಹೆಸರನ್ನು ಬದಲಾಯಿಸಿ ಕೆಲವೇ ದಿನಗಳಲ್ಲಿ ಸರಿಪಡಿಸಲಾದ ಪಹಣಿ ನಿಮ್ಮ ಕೈ ಸೇರಲಿದೆ.
https://landrecords.karnataka.gov.in/service2/ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ನಿಮ್ಮ ಮೊಬೈಲ್ ಫೋನ್‌ನಲ್ಲಿ ಭೂ ದಾಖಲೆ ಮಾಹಿತಿಯನ್ನು ವೀಕ್ಷಿಸಬಹುದು. ನಿಮ್ಮ ಪ್ರದೇಶ. ತಾಲೂಕು, ಹೋಬಳಿ, ಗ್ರಾಮ, ಸರ್ವೆ ಸಂಖ್ಯೆ, ಹಿಸ್ಸಾ ಸಂಖ್ಯೆ ಮತ್ತು ಮಾದರಿ ವರ್ಷವನ್ನು ಆಯ್ಕೆ ಮಾಡುವ ಮೂಲಕ ನೀವು ವಿವರಗಳ ಪರಿಶೀಲಿಸಬಹುದು.