ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗ್ತಿದೆ. ಇದು ಕೆಲವರ ಸಂತೋಷಕ್ಕೆ ಕಾರಣವಾಗಿದೆ. ಆದ್ರೆ ಕೆಲ ತಜ್ಞರು ಕೊರೊನಾ ಮೂರನೇ ಅಲೆ ಶುರುವಾಗಿದೆ ಎನ್ನುತ್ತಿದ್ದಾರೆ. ಈ ಮಧ್ಯೆ ಮತ್ತೊಂದು ಸಮಸ್ಯೆ ಶುರುವಾಗಿದೆ. ಕೊರೊನಾ ಸೋಂಕಿತರ ಆರ್ಟಿಪಿಸಿಆರ್ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ.
ಬೆಂಗಳೂರಿನಲ್ಲಿ ಇಂಥ 8 ಪ್ರಕರಣಗಳು ಪತ್ತೆಯಾಗಿವೆ. ಎಲ್ಲ ರೋಗಿಗಳಿಗೆ ಕೊರೊನಾ ಸೋಂಕಿನ ಲಕ್ಷಣವಿದೆ. ಆಸ್ಪತ್ರೆಗೆ ದಾಖಲಿಸುವಷ್ಟು ಪರಿಸ್ಥಿತಿ ಗಂಭೀರವಾಗಿದೆ. ಆದ್ರೆ ಆರ್ಟಿಪಿಸಿಆರ್ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ. ಸಿಟಿ ಸ್ಕ್ಯಾನ್ ವೇಳೆ ಸೋಂಕಿರುವುದು ಪತ್ತೆಯಾಗಿದೆ. ಇದ್ರಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾನೆಂದು ಮೂಲಗಳು ಹೇಳಿವೆ.
ಆರ್‌ಟಿ-ಪಿಸಿಆರ್ ಪರೀಕ್ಷೆ ವರದಿ ನಕಾರಾತ್ಮಕವಾಗಿ ಬಂದರೂ ರೋಗ ಲಕ್ಷಣ ಹೊಂದಿರುವವರನ್ನು ಸಿಟಿ ಸ್ಕ್ಯಾನ್ ವರದಿಯ ನಂತರ ಕೋವಿಡ್ ರೋಗಿಗಳೆಂದು ಪರಿಗಣಿಸಲಾಗುತ್ತದೆ. ರಾಜ್ಯದಲ್ಲಿ ಇಂತಹ ಶೇಕಡಾ 5-8 ಪ್ರಕರಣಗಳಿವೆ. ಕೆಲವೊಮ್ಮೆ ಆರ್‌ಟಿ-ಪಿಸಿಆರ್ ಪರೀಕ್ಷೆಯನ್ನು ಮತ್ತೆ ಮಾಡುವುದರಿಂದಲೂ ಪ್ರಯೋಜನವಾಗುತ್ತದೆ ಎಂದು ಕರ್ನಾಟಕದ ಕೋವಿಡ್ -19 ಟಾಸ್ಕ್ ಫೋರ್ಸ್ ಸದಸ್ಯ ಡಾ.ಸಿ.ಎನ್.ಮಂಜುನಾಥ್ ಹೇಳಿದ್ದಾರೆ.
ಪರೀಕ್ಷಾ ಕಿಟ್ ನ ಗುಣಮಟ್ಟ ಕೂಡ ಮುಖ್ಯವಾಗುತ್ತದೆ. ಸೋಂಕಿತ ವ್ಯಕ್ತಿಯ ಮಾದರಿ ತೆಗೆದುಕೊಳ್ಳುವ ಸಮಯವೂ ಬಹಳ ಮುಖ್ಯವಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ. ಸೋಂಕಿನ ಒಂಬತ್ತು ದಿನಗಳ ನಂತರ ವ್ಯಕ್ತಿಯ ಸ್ವ್ಯಾಬ್ ತೆಗೆದುಕೊಂಡರೂ ಅಥವಾ ಸ್ಯಾಂಪಲ್ ತೆಗೆದುಕೊಂಡ ನಂತರ ದೀರ್ಘಕಾಲದವರೆಗೆ ಪರೀಕ್ಷಿಸದಿದ್ದರೂ ವರದಿ ನೆಗೆಟಿವ್ ಬರುವ ಸಾಧ್ಯತೆಯಿದೆ.