
ಕಲಬುರಗಿ: ರಾಜ್ಯದ ವಿವಿಧ ಶಿಕ್ಷಣ ಸಂಸ್ಥೆಗಳು, ಪೊಲೀಸ್ ಠಾಣೆಗಳಲ್ಲಿ, ಕಚೇರಿಗಳಲ್ಲಿ ಆರ್.ಎಸ್.ಎಸ್. ಶಾಖೆಗಳು ನಡೆಯುತ್ತಿದ್ದು, ಅವುಗಳನ್ನು ಬಂದ್ ಮಾಡಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನೇಕ ಶಿಕ್ಷಣ ಸಂಸ್ಥೆಗಳು, ಪೊಲೀಸ್ ಠಾಣೆಗಳಲ್ಲಿ ಕೇಸರಿ ಶಾಲು ಹಾಕಿಕೊಂಡಿದ್ದು ಕಂಡುಬಂದಿದೆ. ಇನ್ನು ಮುಂದೆ ಅವೆಲ್ಲವೂ ಬಂದ್ ಆಗಲಿವೆ ಎಂದು ಹೇಳಿದ್ದಾರೆ.
ಕೆಲವೆಡೆ, ಶಿಕ್ಷಣ ಸಂಸ್ಥೆಗಳು, ಠಾಣೆಗಳು, ಕಚೇರಿಗಳಲ್ಲಿಯೂ ಆರ್.ಎಸ್.ಎಸ್. ಚಟುವಟಿಕೆ ನಡೆದಿದೆ. ಕಳೆದ ವರ್ಷ ಪಥಸಂಚಲನ ಮಾಡಲಾಗಿದೆ. ಅಂತಹ ಪೊಲೀಸ್ ಠಾಣೆಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಆರ್.ಎಸ್.ಎಸ್. ಶಾಖೆಗಳನ್ನು ಬಂದ್ ಮಾಡಿಸಲಾಗುವುದು. ಆರ್.ಎಸ್.ಎಸ್. ಬಗ್ಗೆ ಮಾತನಾಡಲು ನನಗೆ ಹೆದರಿಕೆ ಇಲ್ಲ. ಶಾಲೆ, ಕಾಲೇಜು, ವಿವಿಗಳು ಶೈಕ್ಷಣಿಕ ಕೇಂದ್ರವಾಗಬೇಕೆ ಹೊರತೂ ರಾಜಕೀಯ ಅಡ್ಡೆಯಾಗಬಾರದು ಎಂದು ಹೇಳಿದ್ದಾರೆ.