
ಅಕ್ಟೋಬರ್ 17 ರಂದು ಶರದ್ ಪೂರ್ಣಿಮಾ ದಿನವನ್ನು ಆಚರಿಸಲು “ಜಾಗ್ರಣ” ಕಾರ್ಯಕ್ರಮ ನಡೆಯುತ್ತಿದ್ದ ದೇವಸ್ಥಾನದಲ್ಲಿ ದಾಳಿ ಸಂಭವಿಸಿದೆ. ನಸೀಬ್ ಚೌಧರಿ ಮತ್ತು ಅವರ ಪುತ್ರ ಎಂದು ಗುರುತಿಸಲಾದ ಇಬ್ಬರು ಸ್ಥಳೀಯ ನಿವಾಸಿಗಳು ತಡರಾತ್ರಿ ನಡೆಯುತ್ತಿದ್ದ ಉತ್ಸವವನ್ನು ವಿರೋಧಿಸಿದಾಗ ಪರಿಸ್ಥಿತಿ ಉದ್ವಿಗ್ನವಾಯಿತು. ತೀವ್ರ ವಾಗ್ವಾದದ ನಂತರ, ಇಬ್ಬರೂ ಆರ್‌ಎಸ್‌ಎಸ್ ಕಾರ್ಯಕರ್ತರ ಮೇಲೆ ಹಲ್ಲೆಗೆ ಮುಂದಾಗಿದ್ದು ಇವರೊಂದಿಗೆ ಇನ್ನೂ ಹಲವರು ಸೇರಿ ಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ವಿವಾದದ ಸುತ್ತಲಿನ ಸಂದರ್ಭಗಳನ್ನು ತನಿಖೆ ನಡೆಸುತ್ತಿದ್ದಾರೆ.
ಗಾಯಾಳುಗಳಾದ ಶಂಕರ್ ಬಗ್ಡಾ, ಮುರಾರಿಲಾಲ್, ರಾಮ್ ಪರೀಕ್, ಲಖನ್ ಸಿಂಗ್ ಜಾದೂನ್, ಪುಷ್ಪೇಂದ್ರ ಮತ್ತು ದಿನೇಶ್ ಶರ್ಮಾ ಅವರನ್ನು ಚಿಕಿತ್ಸೆಗಾಗಿ ಸವಾಯಿ ಮಾನ್ ಸಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಯಿಂದ ಪ್ರತಿಭಟನೆ ಮತ್ತು ರಸ್ತೆ ತಡೆಗೆ ಕಾರಣವಾಯಿತು. ಕಾನುನು ಸುವ್ಯವಸ್ಥೆ ಕಾಪಾಡಲು ಕರ್ಣಿ ವಿಹಾರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ರಾಜಸ್ಥಾನದ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಎಸ್‌ಎಂಎಸ್ ಆಸ್ಪತ್ರೆಯಲ್ಲಿ ಗಾಯಾಳುಗಳನ್ನು ಭೇಟಿ ಮಾಡಿದ್ದು, ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.