ರಾಮನಗರ: ಆರ್.ಎಸ್.ಎಸ್. ವಿರುದ್ಧ ಮತ್ತೆ ಗಂಭೀರ ಆರೋಪ ಮಾಡಿರುವ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಎಲ್ಲಾ ವಿಶ್ವವಿದ್ಯಾಲಯಗಳಲ್ಲೂ ಆರ್.ಎಸ್.ಎಸ್. ನವರೇ ಸಿಂಡಿಕೇಟ್ ಸದಸ್ಯರಾಗಿದ್ದಾರೆ. ಲಕ್ಷ ಲಕ್ಷ ದೋಚುತ್ತಿದ್ದಾರೆ ಎಂದು ಹೇಳಿದ್ದಾರೆ.
ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ಮಾತನಾಡಿದ ಕುಮಾರಸ್ವಾಮಿ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಆರ್.ಎಸ್.ಎಸ್. ಕಾರ್ಯಕರ್ತರನ್ನು ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಸಿಂಡಿಕೇಟ್ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಕೆಲಸ ಮಾಡಿಕೊಡಲು ಅವರು 1-2 ಲಕ್ಷ ರೂಪಾಯಿ ಬೇಡಿಕೆ ಇಡುತ್ತಿದ್ದಾರೆ ಎಂದು ಆರೋಪಿಸಿದರು.
BIG NEWS: JDS ನಿಂದ ಅವಕಾಶವಾದಿ ರಾಜಕಾರಣ; HDK ಆರೋಪಕ್ಕೆ ತಿರುಗೇಟು ನೀಡಿದ ಸಲೀಂ ಅಹ್ಮದ್
40 ವರ್ಷಗಳ ಹಿಂದೆ ಇದ್ದ ಆರ್.ಎಸ್.ಎಸ್. ಬೇರೆ, ಈಗ ಇರುವ ಆರ್.ಎಸ್.ಎಸ್. ಬೇರೆ. ವಿವಿ ಸಿಂಡಿಕೇಟ್ ಗಳ ಮೆಂಬರ್ ಗಳು ಆರ್.ಎಸ್.ಎಸ್. ಕಾರ್ಯಕರ್ತರು ಎಂದು ವಾಗ್ದಾಳಿ ನಡೆಸಿದ್ದಾರೆ.