ಹುಬ್ಬಳ್ಳಿ: ಆರ್.ಎಸ್.ಎಸ್. ವಿರುದ್ಧ ಮತ್ತೆ ಕಿಡಿಕಾರಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಆರ್.ಎಸ್.ಎಸ್. ಒಂದು ಕೋಮುವಾದಿ ಸಂಘಟನೆಯಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಆರ್.ಎಸ್.ಎಸ್. ಮನುಸ್ಮೃತಿ, ಶ್ರೇಣೀಕೃತ ಸಂಘಟನೆಯಾಗಿದೆ. ಹೀಗಾಗಿ ನಾನು ಆರ್.ಎಸ್.ಎಸ್. ವಿರೋಧಿಸುತ್ತೇನೆ. 1971ರಿಂದಲೂ ನಾನು ಆರ್.ಎಸ್.ಎಸ್. ವಿರೋಧಿ ಎಂದು ಹೇಳಿದರು.
BIG BEWS: ಉಪ ಚುನಾವಣೆ ಅಖಾಡಕ್ಕೆ ವಿಜಯೇಂದ್ರ ಎಂಟ್ರಿ
ಆರ್.ಎಸ್.ಎಸ್. ದೇಶ, ಸಮಾಜ ವಿಭಜನೆ ಕೆಲಸ ಮಾಡುತ್ತಿದೆ. ಅಲ್ಪಸಂಖ್ಯಾತರ ವಿರುದ್ಧವಾದ ಸಂಘಟನೆ. ಬಿಜೆಪಿಯಲ್ಲಿ ಓರ್ವ ಮುಸ್ಲಿಂ ಶಾಸಕರು ಇದ್ದಾರಾ? ಎಂದು ಪ್ರಶ್ನಿಸಿದರು.
ಇದೇ ವೇಳೆ ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆಗಳ ಬಗ್ಗೆಯೂ ಮಾತನಾಡಿದ ಸಿದ್ದರಾಮಯ್ಯ, ಕುಮಾರಸ್ವಾಮಿ ಹಿಟ್ ಆಂಡ್ ರನ್ ಮಾಡುವವರು, ಅವರ ಹೇಳಿಕೆಗಳ ಬಗ್ಗೆ ನಾನು ಪ್ರತಿಕ್ರಿಯೆ ನೀಡಲ್ಲ ಎಂದರು.