ಬೆಂಗಳೂರಲ್ಲಿ ರಸ್ತೆ ಗುಂಡಿಗೆ ಬಿದ್ದು ಗಾಯಗೊಂಡ ಮಹಿಳೆ 15 ದಿನ ಆಸ್ಪತ್ರೆಯಲ್ಲಿದ್ದು ಚಿಕಿತ್ಸೆಗಾಗಿ 7.5 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ.
ಕಳೆದ ತಿಂಗಳು ಆಸ್ಪತ್ರೆಗೆ ದಾಖಲಾದ ಉದ್ಯೋಗಸ್ಥ ಮಹಿಳೆ 15 ದಿನಗಳ ವೈದ್ಯಕೀಯ ಬಿಲ್‌ಗಾಗಿ 7.5 ಲಕ್ಷ ರೂ ಪಾವತಿಸಿದ್ದಾರೆ. ಬಲ ಮೊಣಕಾಲು ಮತ್ತು ಮೂಳೆ ಜೋಡಣೆಯನ್ನು ಸರಿಪಡಿಸಲು ಎರಡು ಶಸ್ತ್ರಚಿಕಿತ್ಸೆ ಮಾಡಿದ ನಂತರ ಆರು ತಿಂಗಳವರೆಗೆ ಕೆಲಸಕ್ಕೆ ಹಾಜರಾಗದಂತೆ ಆಕೆಗೆ ವೈದ್ಯರು ಸೂಚಿಸಿದ್ದಾರೆ.
ಅಕ್ಟೋಬರ್ 16 ರಂದು ರಾತ್ರಿ ಪೀಣ್ಯ 2ನೇ ಹಂತದ ನಿವಾಸಿ ಎಸ್.ಸುಗುಣ ಅವರು ನಂದಿನಿ ಲೇಔಟ್‌ನಿಂದ ಹಿಂತಿರುಗುತ್ತಿದ್ದಾಗ ಮನೆಯಿಂದ ಕೇವಲ 1.5 ಕಿಲೋಮೀಟರ್ ದೂರದಲ್ಲಿರುವಾಗ 14ನೇ ಕ್ರಾಸ್‌ನಲ್ಲಿ ರಸ್ತೆಗುಂಡಿಗೆ ಬೈಕ್ ನಿಯಂತ್ರಣ ತಪ್ಪಿ ಪಲ್ಟಿಯಾಯಿತು. ಈ ವೇಳೆ ಗುಂಡಿಯಲ್ಲಿ ಮಳೆನೀರು ತುಂಬಿದ್ದರಿಂದ ಸುಗುಣಾಗೆ ಅದರ ಆಳವನ್ನು ನಿರ್ಣಯಿಸಲು ಸಾಧ್ಯವಾಗಿರಲಿಲ್ಲ.
ಘಟನೆ ಬಗ್ಗೆ ಮಾತನಾಡಿದ ಸುಗುಣಾ ಪತಿ ಮಹೇಶ್, “ಆಕೆ ನಿಧಾನವಾಗಿ ಸವಾರಿ ಮಾಡುತ್ತಿದ್ದರು ಆದರೆ ಗುಂಡಿ ತುಂಬಾ ಆಳವಾಗಿದ್ದರಿಂದ ಸಮತೋಲನವನ್ನು ಕಳೆದುಕೊಂಡಿದ್ದು, ಸುಗುಣಾ ಕಳೆದ ನಾಲ್ಕು ವರ್ಷಗಳಿಂದ ಕೆಲಸಕ್ಕೆ ದ್ವಿಚಕ್ರ ವಾಹನದಲ್ಲೇ ಹೋಗುತ್ತಿದ್ದರು ಎಂದಿದ್ದಾರೆ.
ಫ್ಯಾಮಿಲಿ ಇನ್ಸುರೆನ್ಸ್ ನಲ್ಲಿ ನನಗೆ ತಕ್ಷಣವೇ 5.6 ಲಕ್ಷ ರೂಪಾಯಿ ಪರಿಹಾರವಾಗಿ ಸಿಕ್ಕಿತು. ಅದಾಗ್ಯೂ ನಾನು ನನ್ನ ಸ್ವಂತ ಜೇಬಿನಿಂದ 2 ಲಕ್ಷ ರೂ. ಖರ್ಚು ಮಾಡಿದ್ದೇನೆ. ಮುಂದಿನ ಆರು ವಾರಗಳವರೆಗೆ ಆಕೆಗೆ ಬೆಡ್ ರೆಸ್ಟ್ ಮತ್ತು ಫಿಸಿಯೋಥೆರಪಿಗೆ ಸಲಹೆ ನೀಡಲಾಗಿದೆ ಎಂದು ಹೇಳಿದರು.
ಆರು ವರ್ಷದ ಮಗ ಮತ್ತು ವಯಸ್ಸಾದ ತಾಯಿಯನ್ನು ಹೊಂದಿರುವ ದಂಪತಿಗೆ ಅಪಘಾತದ ಖರ್ಚು ದುಬಾರಿಯಾಗಿದ್ದು ರಸ್ತೆ ಗುಂಡಿ ಮುಚ್ಚದ ಆಡಳಿತ ವ್ಯವಸ್ಥೆ ವಿರುದ್ಧ ಕಿಡಿಕಾರಿದ್ದಾರೆ.
“ಗುಂಡಿಯಿಂದ ಅಪಘಾತ ಸಂಭವಿಸಿದೆ ಎಂದು ದೂರು ನೀಡಲು ನಾನು ಪೊಲೀಸ್ ಠಾಣೆಯನ್ನು ಸಂಪರ್ಕಿಸಿದಾಗ, ಅವರು ಅದನ್ನು ಸ್ವೀಕರಿಸಲು ನಿರಾಕರಿಸಿದರು. ಸುಗುಣಾ ಅಪಘಾತದ ನಂತರ ನಾನು ಮಳೆ ಬಂದಾಗ ನನ್ನ ದ್ವಿಚಕ್ರ ವಾಹನವನ್ನು ಓಡಿಸದಿರಲು ನಿರ್ಧರಿಸಿದೆ. ಗುಂಡಿಗಳಿಂದ ತುಂಬಿರುವ ರಸ್ತೆಗಳು ದ್ವಿಚಕ್ರ ವಾಹನ ಸವಾರರಿಗೆ ಸೂಕ್ತವಲ್ಲ ಎಂದು ಮಹೇಶ್ ಹೇಳಿದರು.