
ಒಲಿಂಪಿಕ್ಸ್‌ನ ಅಥ್ಲೆಟಿಕ್ಸ್ ಇವೆಂಟ್‌ನಲ್ಲಿ ಭಾರತಕ್ಕೆ ಮೊದಲ ವೈಯಕ್ತಿಕ ಚಿನ್ನ ಗೆದ್ದುಕೊಟ್ಟ ನೀರಜ್ ಚೋಪ್ರಾಗೆ ಬಹುಮಾನಗಳ ಸುರಿಮಳೆಯೇ ಬರುತ್ತಿವೆ.
ಪುರುಷರ ಜಾವೆಲಿನ್ ಎಸೆತದ ಫೈನಲ್‌ನಲ್ಲಿ ಎರಡನೇ ಪ್ರಯತ್ನದಲ್ಲಿ 87.58 ಮೀಟರ್ ಎಸೆದು ಪೋಡಿಯಂನಲ್ಲಿ ಭಾರತದ ರಾಷ್ಟ್ರಗೀತೆ ಮೊಳಗುವಂತೆ ಮಾಡಿದ್ದಾರೆ 23 ವರ್ಷದ ಸುಬೇದಾರ್.
ಚೋಪ್ರಾರ ಈ ಅಪ್ರತಿಮ ಸಾಧನೆಗೆ ಅವರಿಗಾಗಿ ಘೋಷಿಸಲ್ಪಟ್ಟ ಪುರಸ್ಕಾರಗಳ ವಿವರಗಳು ಇಂತಿವೆ:
BIG NEWS: 21 ಲಕ್ಷ ತೆರಿಗೆದಾರರಿಗೆ ಬರೋಬ್ಬರಿ 45,000 ಕೋಟಿ ರೂ. ರೀಫಂಡ್
1. ಹರಿಯಾಣಾ ಸರ್ಕಾರದಿಂದ ಆರು ಕೋಟಿ ರೂಪಾಯಿ ಹಾಗೂ ಕ್ಲಾಸ್-1 ಸರ್ಕಾರೀ ಹುದ್ದೆ. ಹರಿಯಾಣಾದ ಯಾವುದೇ ಭಾಗದಲ್ಲಿ ಜಮೀನು ಖರೀದಿ ಮಾಡಿದರೂ 50% ರಿಯಾಯಿತಿ.
2. ಬಿಸಿಸಿಐನಿಂದ ಒಂದು ಕೋಟಿ ರೂಪಾಯಿ.
3. ಪಂಜಾಬ್ ಸರ್ಕಾರದಿಂದ ಎರಡು ಕೋಟಿ ರೂಪಾಯಿ.
4. ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ಫ್ರಾಂಚೈಸಿಯಿಂದ ಒಂದು ಕೋಟಿ ರೂಪಾಯಿ.
5. ಮಣಿಪುರ ಸರ್ಕಾರದಿಂದ ಒಂದು ಕೋಟಿ ರೂಪಾಯಿ.
6. ಆನಂದ್ ಮಹಿಂದ್ರಾರಿಂದ ಎಕ್ಸ್‌ಯುವಿ700 ಕಾರು.
7. ಇಂಡಿಗೋ ವಿಮಾನದಲ್ಲಿ ಒಂದು ವರ್ಷದ ಮಟ್ಟಿಗೆ ಉಚಿತ ಪ್ರಯಾಣ