alex Certify ಮಿಶ್ರತಳಿ ಹಸು ಸಾಕಾಣಿಕೆಗೆ ಸಿಗಲಿದೆ 58,500 ರೂಪಾಯಿ ಸಹಾಯಧನ : ಈಗಲೇ ಅರ್ಜಿ ಸಲ್ಲಿಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಿಶ್ರತಳಿ ಹಸು ಸಾಕಾಣಿಕೆಗೆ ಸಿಗಲಿದೆ 58,500 ರೂಪಾಯಿ ಸಹಾಯಧನ : ಈಗಲೇ ಅರ್ಜಿ ಸಲ್ಲಿಸಿ

ಬೆಂಗಳೂರು :  ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವತಿಯಿಂದ 2023-24 ನೇ ಸಾಲಿನ ಹಾಲು ಉತ್ಪಾದಕರಿಗೆ ಉತ್ತೇಜನ ಕಾರ್ಯಕ್ರಮದ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ ಉಳಿಕೆ ಅನುದಾನದಲ್ಲಿ  ಮಿಶ್ರತಳಿ ಹಸು ಘಟಕ  ಅನುಷ್ಠಾನಗೊಳಿಸಲು ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಮಿಶ್ರತಳಿ ಹಸು ಘಟಕದಲ್ಲಿ  ಮಿಶ್ರ ತಳಿ ಹಸು ವಿತರಿಸಲಾಗುವುದು, ಘಟಕ ವೆಚ್ಚ ರೂ. 65,000/-ಇದ್ದು, ಪರಿಶಿಷ್ಟ ಜಾತಿ  ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ (ಶೇ.90) ರೂ. 58,500/- ಸಹಾಯಧನ ಮತ್ತು (ಶೇ.10) ರೂ.6500/- ಫಲಾನುಭವಿಗಳ ವಂತಿಕೆ ಅಥವಾ ಬ್ಯಾಂಕ್‌ನಿAದ ಸಾಲದೊಂದಿಗೆ ಅನುಷ್ಠಾನಗೊಳಿಸಲಾಗುವುದು.

ಅರ್ಜಿದಾರರು  FRUITS ID  (ಗುರುತಿನ ಸಂಖ್ಯೆ) ಹೊಂದಿರಬೇಕು. ಪಶುಸಂಗೋಪನೆಯಲ್ಲಿ ತೊಡಗಿಸಿಕೊಂಡ ಮತ್ತು ಆಸಕ್ತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕೂಲಿ ಕಾರ್ಮಿಕರು, ಕೃಷಿ ಕಾರ್ಮಿಕರನ್ನು ಆಯ್ಕೆ ಮಾಡಲಾಗುವುದು. ಆಯ್ಕೆಗೊಂಡ ಫಲಾನುಭವಿಗಳು ಕಡ್ಡಾಯವಾಗಿ ಹಾಲು ಉತ್ಪಾದಕರ ಸಹಕಾರ ಸಂಘಗಳ  ಸದಸ್ಯರಾಗಿರಬೇಕು ಅಥವಾ ಸದಸ್ಯತ್ವ ಕಡ್ಡಾಯವಾಗಿ ಪಡೆಯಬೇಕು. ಆಯ್ಕೆಗೊಂಡ ಫಲಾನುಭವಿ ಸ್ವತ್ತು ಪಡೆದ ನಂತರ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಕಡ್ಡಾಯವಾಗಿ ಹಾಲು ಪೂರೈಸುವ ಷರತ್ತಿಗೆ ಒಳಪಟ್ಟು ಮುಚ್ಚಳಿಕೆಯನ್ನು ವ್ಯವಸ್ಥಾಪಕರು/ಪ್ರತಿನಿಧಿಯವರಿಂದ ಧೃಢೀಕರಿಸಿ ಸಲ್ಲಿಸಬೇಕು. ಕಳೆದ 5 ವರ್ಷಗಳಲ್ಲಿ ಪಶುಪಾಲನಾ ಇಲಾಖೆಯಲ್ಲಿ ವಿವಿಧ ಯೋಜನೆಗಳಲ್ಲಿ ಹೈನುಗಾರಿಕೆಗೆ ಸಹಾಯಧನ ಸವಲತ್ತು ಪಡೆದಿರುವ ಕುಟುಂಬಗಳು ಈ ಯೋಜನೆಯ ಸವಲತ್ತು ಪಡೆಯಲು ಅರ್ಹರಿರುವುದಿಲ್ಲ. ಸರ್ಕಾರದ ನಿಯಮದಂತೆ ಮಹಿಳೆಯರಿಗೆ ಶೇ.33.3 ರಷ್ಟು ಮತ್ತು ವಿಶೇಷ ಚೇತನರಿಗೆ ಶೇ. 3 ರಷ್ಟು  ಅದ್ಯತೆ ನೀಡಲಾಗುವುದು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳು ಆರ್‌ಡಿ ಸಂಖ್ಯೆ ಇರುವ ಜಾತಿ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕು. ವಿಶೇಷ ಚೇತನರಾಗಿದ್ದಲ್ಲಿ ಪ್ರಮಾಣ ಪತ್ರ ಹೊಂದಿರಬೇಕು.

ಅರ್ಜಿ ಸಲ್ಲಿಸಲು  ನವೆಂಬರ್ 25 ಕೊನೆಯ ದಿನವಾಗಿದ್ದು, ಅರ್ಜಿಗಳಿಗಾಗಿ ಮತ್ತು ಹೆಚ್ಚಿನ ಮಾಹಿತಿಗಾಗಿ ತಾಲ್ಲೂಕುಗಳ ಮುಖ್ಯ ಪಶುವೈದ್ಯಾಧಿಕಾರಿಗಳು(ಆಡಳಿತ) / ಮುಖ್ಯ ಪಶುವೈದ್ಯಾಧಿಕಾರಿಗಳನ್ನು ಸಂಪರ್ಕಿಸಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...