ಬೆಂಗಳೂರು: ಬಿಎಂಟಿಸಿ ಚಾಲಕರಿಗೆ 500 ರೂಪಾಯಿ ವಿಶೇಷ ರಜೆ ಭತ್ಯೆ ಘೋಷಣೆ ಮಾಡಲಾಗಿದೆ. ನಿತ್ಯವೂ ಶೇಕಡ 6.8 ರಷ್ಟು ಸಿಬ್ಬಂದಿ ರಜೆ, ದೀರ್ಘ ರಜೆ ಕಾರಣ ಕಾರ್ಯನಿರ್ವಹಣೆ ಕಷ್ಟವಾಗುತ್ತದೆ.
ಚಾಲನಾ ಸಿಬ್ಬಂದಿ ಗೈರು ಆಗುವುದರಿಂದ ಸಮರ್ಪಕವಾಗಿ ಬಸ್ ಸೇವೆ ನೀಡಲು ಸಮಸ್ಯೆ ಆಗಿದೆ. ಇದನ್ನು ನಿವಾರಿಸಲು ವಾರದ ರಜೆ ಹೊರತಾಗಿ ಬೇರೆ ರಜೆ ತೆಗೆದುಕೊಳ್ಳದೆ ಕೆಲಸ ಮಾಡುವ ಚಾಲಕರಿಗೆ ವಿಶೇಷ ಭತ್ಯೆ ನೀಡಲು ಬಿಎಂಟಿಸಿ ನಿರ್ಧರಿಸಿದೆ.
ತಿಂಗಳಲ್ಲಿ ವಾರದ ರಜೆಗಳನ್ನು ಹೊರತುಪಡಿಸಿ 26 ದಿನಗಳ ಕಾಲ ಬೇರೆ ರಜೆ ಪಡೆಯದೆ ಕರ್ತವ್ಯಕ್ಕೆ ಹಾಜರಾಗುವ, ಆ ತಿಂಗಳು ಯಾವುದೇ ರೀತಿಯ ಶಿಸ್ತು ಕ್ರಮಕ್ಕೆ ಒಳಗಾಗದ ಚಾಲನಾ ಸಿಬ್ಬಂದಿಗೆ ಮಾಸಿಕ 500 ವಿಶೇಷ ಭತ್ಯೆ ನೀಡಲಾಗುವುದು. ಪ್ರತಿ ತಿಂಗಳ ವೇತನಕ್ಕೆ ಮುನ್ನ ರಜೆ ರಹಿತ ಚಾಲಕರ ಘಟಕವಾರು ಪಟ್ಟಿಯನ್ನು ವಲಯದ ಅಧಿಕಾರಿಗಳು ಮುಖ್ಯ ಸಂಚಾರ ವ್ಯವಸ್ಥಾಪಕರಿಗೆ ಸಲ್ಲಿಸಬೇಕು. ಇದನ್ನು ಆಧರಿಸಿ ರಜೆ ಪಡೆಯದ ಚಾಲಕರ ವೇತನಕ್ಕೆ ವಿಶೇಷ ಭತ್ಯೆ ಸೇರಿಸಿ ನೀಡಲಾಗುವುದು.