ಕೊಪ್ಪಳ: ಕೊಪ್ಪಳ ಜಿಲ್ಲೆಯ ಕುಷ್ಟಗಿಯಲ್ಲಿ ಗ್ರಾಹಕರಿಗೆ ದೋಸೆ ಪಾರ್ಸೆಲ್ ಕೊಡುವ ಬದಲಿಗೆ ಬ್ಯಾಂಕಿಗೆ ಕಟ್ಟಲು ಇಟ್ಟಿದ್ದ 49,625 ರೂ. ಇದ್ದ ಹಣದ ಚೀಲವನ್ನು ಕೊಟ್ಟು ಹೋಟೆಲ್ ಮಾಲೀಕ ಪೇಚಿಗೆ ಸಿಲುಕಿದ್ದಾರೆ.
ದೋಸೆ ಪಾರ್ಸೆಲ್ ಎಂದು ಹಣದ ಚೀಲ ತೆಗೆದುಕೊಂಡು ಹೋಗಿದ್ದ ಶಿಕ್ಷಕ ಅದನ್ನು ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಶನಿವಾರ ಕುಷ್ಟಗಿಯಲ್ಲಿ ಘಟನೆ ನಡೆದಿದೆ. ಶಿಕ್ಷಕ ಎನ್. ಶ್ರೀನಿವಾಸ ದೇಸಾಯಿ ಬೆಳಗ್ಗೆ ಶಾಲೆಗೆ ಹೋಗುವಾಗ ತಮ್ಮ ಮಗಳಿಗೆ ಪಟ್ಟಣದ ಸೌದಾಗರ್ ಹೋಟೆಲ್ ನಲ್ಲಿ ದೋಸೆ ಕಟ್ಟಿಸಿಕೊಂಡಿದ್ದಾರೆ. ಆದರೆ, ಹೋಟೆಲ್ ಮಾಲೀಕರ ರಸೂಲ್ ಖಾನ್ ದೋಸೆ ಪಾರ್ಸೆಲ್ ಬ್ಯಾಗ್ ಕೊಡುವ ಬದಲಿಗೆ ಬ್ಯಾಂಕಿಗೆ ಕಟ್ಟಲು ಇಟ್ಟಿದ್ದ ಹಣವಿದ್ದ ಪ್ಲಾಸ್ಟಿಕ್ ಚೀಲವನ್ನು ಶ್ರೀನಿವಾಸ ಅವರಿಗೆ ಕೊಟ್ಟಿದ್ದಾರೆ. ನಂತರದಲ್ಲಿ ಇದನ್ನು ಗಮನಿಸಿದ ಶಿಕ್ಷಕ ಶ್ರೀನಿವಾಸ್ ಹಣವಿದ್ದ ಬ್ಯಾಗ್ ವಾಪಸ್ ಮಾಡಿ ಪ್ರಾಮಾಣಿಕತೆ ಮೆರೆದಿದ್ದಾರೆ.