ನವದೆಹಲಿ: ವಾರಸುದಾರರಿಲ್ಲದೆ ಬ್ಯಾಂಕುಗಳಲ್ಲಿ ಅನಾಥವಾಗಿರುವ 48,461 ಕೋಟಿ ರೂ. ಠೇವಣಿ ಹಣವನ್ನು ಶಿಕ್ಷಣ ಮತ್ತು ಜಾಗೃತ ನಿಧಿಗೆ ಹಸ್ತಾಂತರಿಸಲಾಗಿದೆ ಎಂದು ಕೇಂದ್ರ ಸರ್ಕಾರ ರಾಜ್ಯಸಭೆಗೆ ಮಾಹಿತಿ ನೀಡಿದೆ.
2023ರ ಮಾರ್ಚ್ 31ರ ವೇಳೆಗೆ 16,79,32,112 ವಿವಿಧ ಬ್ಯಾಂಕ್ ಖಾತೆಗಳಲ್ಲಿ 48,461 ಕೋಟಿ ರೂ. ಹಣ ಇದ್ದು, ಇದನ್ನು ಯಾರು ಕ್ಲೇಮ್ ಮಾಡಿಕೊಂಡಿರಲಿಲ್ಲ. ಹಾಗಾಗಿ ನಿಯಮಾನುಸಾರ ಶಿಕ್ಷಣ ನಿಧಿಗೆ ಈ ಹಣ ಬಳಕೆ ಮಾಡಲಾಗಿದೆ. ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಭಾಗವತ್ ಕರಾಡ್ ಮಾಹಿತಿ ನೀಡಿದ್ದು, ಶೈಕ್ಷಣಿಕ ಉದ್ದೇಶಕ್ಕೆ ಹಣ ಬಳಕೆ ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ.