
ಬೆಂಗಳೂರು: ಕಟ್ಟಡ ಕಾರ್ಮಿಕರ ಆರೋಗ್ಯ ತಪಾಸಣೆ ಹೆಸರಲ್ಲಿ 47.99 ಕೋಟಿ ರೂಪಾಯಿ ಗುಳುಂ ಮಾಡಲಾಗಿದೆ ಎಂದು ಬಿಜೆಪಿ ನಿಯೋಗದಿಂದ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ.
ಯಾವುದೇ ಆರೋಗ್ಯ ತಪಾಸಣೆ ನಡೆಸದೆ ಹಣ ಲೂಟಿ ಮಾಡಿದ್ದಾರೆ. ಒಂದೊಂದಕ್ಕೂ ಒಂದೊಂದು ರೀತಿ ಬಿಲ್ ಮಾಡಿ ಹಣ ಲಪಟಾಯಿಸಿದ್ದಾರೆ. ಅರ್ಹತೆ ಇಲ್ಲದ ಕಂಪನಿಗೆ ಟೆಂಡರ್ ಕೊಟ್ಟು ಹಣ ಹೊಡೆದಿದ್ದಾರೆ. ಇದಕ್ಕೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ನೇರ ಹೊಣೆಯಾಗಿದ್ದಾರೆ. ಕೂಡಲೇ ಕಾರ್ಮಿಕ ಸಚಿವ ಸಂತೋಷ್ ಲಾಡ್ ರಾಜೀನಾಮೆ ನೀಡಬೇಕು ಎಂದು ಲೋಕಾಯುಕ್ತಕ್ಕೆ ದೂರು ನೀಡಿದ ಬಳಿಕ ವಿಧಾನಪರಿಷತ್ ಸದಸ್ಯ ರವಿಕುಮಾರ್ ಆಗ್ರಹಿಸಿದ್ದಾರೆ.