ವಿಜಯಪುರ : ಕೊರೊನಾ ಕಾಲದಲ್ಲಿ ಸುಮಾರು 40 ಸಾವಿರ ಕೋಟಿ ರೂ.ಅವ್ಯವಹಾರ ನಡೆದಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರದ ಅವಧಿಯಲ್ಲಿ ಸುಮಾರು 40 ಸಾವಿರ ಕೋಟಿ ರೂ.ಅವ್ಯವಹಾರ ನಡೆದಿದೆ. ಎಲ್ಲೆಲ್ಲಿ ಲೂಟಿಯಾಗಿದೆ ಎಂಬುದು ಶೀಘ್ರವೇ ಹೊರತೆಗೆಯುತ್ತೇನೆ ಎಂದು ಹೇಳುವ ಮೂಲಕ ಸ್ವಪಕ್ಷದ ನಾಯಕರ ವಿರುದ್ಧವೇ ಗಂಭೀರ ಆರೋಪ ಮಾಡಿದ್ದಾರೆ.
ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಇದ್ದಾಗ ಮಾಸ್ಕ್ ಗೆ ಎಷ್ಟು ಖರ್ಚು ಮಾಡಿದ್ದೀರಿ? 45 ರೂ. ಮಾಸ್ಕ 485 ರೂ. ಹಾಕಿದ್ದೀರಿ. ಬೆಂಗಳೂರಿನಲ್ಲಿ 10 ಸಾವಿರ ರೂ. ಬೆಡ್ ಬಾಡಿಗೆ ಪಡೆದಿದ್ದೀರಿ. ಇದರಲ್ಲಿ ಹೊಸ ಬೆಡ್ ತಗೊಬಹುದಿತ್ತು.ಇದರಲ್ಲಿ ಎಷ್ಟು ಸಾವಿರ ಕೋಟಿ ಲೂಟಿ ಹೊಡೆದಿದ್ದಾರೆ ಎಂದು ಗೊತ್ತಿದೆ. ಪ್ರತಿ ಸೋಂಕಿತರಿಗೆ 8 ರಿಂದ 10 ಲಕ್ಷ ರೂ. ಬಿಲ್ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ