alex Certify ಜನಸಾಮಾನ್ಯರಿಗೆ ಮತ್ತೆ ಬಿಗ್ ಶಾಕ್: ಕೆಜಿಗೆ 400 ರೂ. ದಾಟಿದ ಬೆಳ್ಳುಳ್ಳಿ, 80 ರೂ. ಮುಟ್ಟಿದ ಈರುಳ್ಳಿ ದರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜನಸಾಮಾನ್ಯರಿಗೆ ಮತ್ತೆ ಬಿಗ್ ಶಾಕ್: ಕೆಜಿಗೆ 400 ರೂ. ದಾಟಿದ ಬೆಳ್ಳುಳ್ಳಿ, 80 ರೂ. ಮುಟ್ಟಿದ ಈರುಳ್ಳಿ ದರ

ಬೆಂಗಳೂರು: ಬೆಳ್ಳುಳ್ಳಿ ದರ ಕೆಜಿಗೆ 400 ರೂಪಾಯಿ ಗಡಿ ದಾಟಿದೆ. ಫೆಬ್ರವರಿಯಲ್ಲಿ 500 ರೂ. ಗಡಿ ದಾಟಿದ ಬೆಳ್ಳುಳ್ಳಿ ದರ ಪ್ರಸಕ್ತ ವರ್ಷದಲ್ಲಿ ಸತತ ಎರಡನೇ ಬಾರಿಗೆ ಏರಿಕೆಯಾಗಿ ಜನಸಾಮಾನ್ಯರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ.

ಶ್ರಾವಣ ಮಾಸದೊಂದಿಗೆ ಹಬ್ಬಗಳ ಸಾಲು ಆರಂಭವಾಗಿದ್ದು, ಮದುವೆ ಸಮಾರಂಭಗಳು ಹೆಚ್ಚಾಗಿರುವುದರಿಂದ ಬೆಳ್ಳುಳ್ಳಿಗೆ ಬೇಡಿಕೆ ಕೂಡ ಹೆಚ್ಚಾಗಲಿದ್ದು, ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ದೇಶದ ಒಟ್ಟು ಬೆಳ್ಳುಳ್ಳಿ ಉತ್ಪಾದನೆಯಲ್ಲಿ ಮಧ್ಯಪ್ರದೇಶ ಶೇಕಡ 70ರಷ್ಟು ಪಾಲು ಹೊಂದಿದೆ. ಮಧ್ಯಪ್ರದೇಶದಿಂದ ಆವಕ ಇಳಿಕೆಯಾಗಿರುವುದರಿಂದ ಈ ವರ್ಷದಲ್ಲಿ ಎರಡನೇ ಸಲ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ.

ಕೇಂದ್ರ ಸರ್ಕಾರ ದೇಶದ ರೈತರ ಹಿತ ದೃಷ್ಟಿಯಿಂದ ಬೆಳ್ಳುಳ್ಳಿ ಮೇಲಿನ ಆಮದು ಸುಂಕವನ್ನು 100ರಷ್ಟು ಹೆಚ್ಚಿಸಿದ್ದು, ಅತಿ ಹೆಚ್ಚು ಪ್ರಮಾಣದಲ್ಲಿ ಬೆಳ್ಳುಳ್ಳಿ ಬೆಳೆಯುವ ಈಜಿಪ್ಟ್, ಇರಾನ್ ನಿಂದ ಬೆಳ್ಳುಳ್ಳಿ ಆಮದು ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆಮದು ಮಾಡಿಕೊಂಡರೂ ಸ್ಥಳೀಯವಾಗಿ ಕಡಿಮೆ ದರಕ್ಕೆ ಮಾರಾಟ ಮಾಡುವುದು ಕಷ್ಟವಾಗುತ್ತದೆ.

ರಾಜ್ಯದ ಹಲವು ಕಡೆ ರೈತರು ಬೆಳ್ಳುಳ್ಳಿ ಬೆಳೆಯುತ್ತಾರೆ. ಆದರೆ ಆವಕ ಕಡಿಮೆಯಾಗಿ ಬೇಡಿಕೆ ಹೆಚ್ಚಾಗುತ್ತಿರುವುದರಿಂದ ಬೆಲೆ ಏರಿಕೆಯಾಗಿದೆ.

ಇನನ್ಉ ಈರುಳ್ಳಿ ದರ ಕೂಡ ಏರಿಕೆ ಹಾದಿಯಲ್ಲಿದೆ. ಭಾರಿ ಮಳೆಯಿಂದ ಗುಣಮಟ್ಟದ ಈರುಳ್ಳಿ ಮಾರುಕಟ್ಟೆಗೆ ಪೂರೈಕೆ ಆಗುತ್ತಿಲ್ಲ. ಚಿಲ್ಲರೆ ಮಾರುಕಟ್ಟೆಯಲ್ಲಿ ಕೆಜಿ ಈರುಳ್ಳಿ ದರ 52 ರೂ. ದಾಟಿದ್ದು, ಸೂಪರ್ ಮಾರ್ಕೆಟ್ ಗಳಲ್ಲಿ 80 ರೂಪಾಯಿಗೆ ತಲುಪಿದೆ. ರಾಜ್ಯದ ಅನೇಕ ಕಡೆ ಬೆಳೆದ ಈರುಳ್ಳಿ ಮಳೆಯಿಂದಾಗಿ ಹಾನಿಯಾಗಿದೆ. ಅಲ್ಪಸ್ವಲ್ಪ ಪ್ರಮಾಣದ ಈರುಳ್ಳಿಯನ್ನು ರೈತರು ಮಾರುಕಟ್ಟೆಗೆ ತಂದರೂ ಅದು ಗುಣಮಟ್ಟದಿಂದ ಕೂಡಿಲ್ಲ. ಕೆಲವು ವರ್ತಕರು ಈರುಳ್ಳಿ ದಾಸ್ತಾನು ಮಾಡಿ ಪೂರೈಕೆ ಸ್ಥಗಿತಗೊಳಿಸಿದ್ದಾರೆ. ಹೀಗಾಗಿ ಸ್ಥಳೀಯ ಮಾರುಕಟ್ಟೆಗಳಲ್ಲಿ ಚಿಲ್ಲರೆ ಈರುಳ್ಳಿ ದರ ಏರಿಕೆಯಾಗುತ್ತಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...