ನವದೆಹಲಿ: ದೇಶದ ಸಾರ್ವಜನಿಕ ವಲಯದ ಅತಿ ದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಗ್ರಾಹಕರೆ ಇತ್ತೀಚೆಗೆ ಎಟಿಎಂ ವಿತ್ ಡ್ರಾ ಮಿತಿ ಮೀರದಿದ್ರೂ ನಿಮ್ಮ ಖಾತೆಯಿಂದ 147.5 ರೂ. ಕಡಿತವಾಗಿರೋದನ್ನು ಗಮನಿಸಿದ್ದೀರಾ ? ಅದು ಕಡಿತವಾಗುತ್ತಿರುವುದು ಏಕೆ ಎಂದು ಇಲ್ಲಿ ಹೇಳುತ್ತಿದ್ದೇವೆ ಕೇಳಿ.
ಎಟಿಎಂನಿಂದ ಹಣ ವಿತ್ ಡ್ರಾ ಮಾಡಲು ಕೂಡ ಎಸ್ ಬಿ ಐ ಮಿತಿ ಹೇರಿದೆ. ನಿರ್ದಿಷ್ಟ ಮಿತಿ ಮೀರಿದ ವಹಿವಾಟಿನ ಮೇಲೆ ಶುಲ್ಕ ವಿಧಿಸಲಾಗುತ್ತದೆ. ಆದರೆ, ಇತ್ತೀಚೆಗೆ ನೀವು ಎಟಿಎಂ ವಿತ್ ಡ್ರಾ ಮಿತಿ ಮೀರದಿದ್ರೂ ನಿಮ್ಮ ಖಾತೆಯಿಂದ ಹಣ ಕಡಿತವಾಗುತ್ತಿದೆ. ಇದಕ್ಕೆ ಕಾರಣ ನೀವು ಬಳಸುತ್ತಿರುವ ಡೆಬಿಟ್ ಅಥವಾ ಎಟಿಎಂ ಕಾರ್ಡ್ನ ವಾರ್ಷಿಕ ನಿರ್ವಹಣೆ. ಈ ನಿರ್ವಹಣೆಗಾಗಿ ಸೇವಾ ಶುಲ್ಕದ ರೂಪದಲ್ಲಿ 147.5 ರೂ. ಕಡಿತ ಮಾಡಲಾಗಿದೆ.
ಯುವ (Yuva), ಗೋಲ್ಡ್ (Gold), ಕಾಂಬೋ (Combo), ಮೈ ಕಾರ್ಡ್ (ಇಮೇಜ್) ಡೆಬಿಟ್ ಕಾರ್ಡ್ ಮೇಲೆ ವಾರ್ಷಿಕ 175+ಜಿ ಎಸ್ ಟಿ ನಿರ್ವಹಣಾ ಶುಲ್ಕ ವಿಧಿಸಲಾಗುತ್ತದೆ. ಪ್ಲಾಟಿನಂ ಡೆಬಿಟ್ ಕಾರ್ಡ್ (Platinum Debit card) ಮೇಲೆ 250 ರೂ. +ಜಿ ಎಸ್ ಟಿ ವಿಧಿಸಲಾಗುತ್ತದೆ. ಇನ್ನು ಪ್ರೈಡ್/ ಪ್ರೀಮಿಯಂ ಬ್ಯುಸಿನೆಸ್ ಡೆಬಿಟ್ ಕಾರ್ಡ್ ಗಳ ಮೇಲೆ 350ರೂ. + ಜಿ ಎಸ್ ಟಿ ವಿಧಿಸಲಾಗುತ್ತದೆ. ಒಂದು ವೇಳೆ ನೀವು ಡೆಬಿಟ್ ಕಾರ್ಡ್ ಬದಲಾಯಿಸಲು ಬಯಸಿದರೆ ಬ್ಯಾಂಕ್ 300+ಜಿ ಎಸ್ ಟಿ ಶುಲ್ಕ ವಿಧಿಸುತ್ತದೆ.