ಚಂಡೀಗಢ: ಶೇಕಡ 100 ರಷ್ಟು ಲಸಿಕೆ ಗುರಿ ಸಾಧಿಸುವ ಗ್ರಾಮಗಳಿಗೆ 10 ಲಕ್ಷ ರೂಪಾಯಿ ಅನುದಾನ ನೀಡುವುದಾಗಿ ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಘೋಷಿಸಿದ್ದಾರೆ.
4 ಸಾವಿರಕ್ಕೂ ಅಧಿಕ ಸ್ಥಳಗಳಲ್ಲಿ ವರ್ಚುಯಲ್ ಮೂಲಕ ಹಳ್ಳಿಗಳ ಸರಪಂಚರು, ಸದಸ್ಯರೊಂದಿಗೆ ಸಂವಾದ ನಡೆಸಿದ ಅವರು, ತಮ್ಮ ಪ್ರದೇಶಗಳಲ್ಲಿ ವ್ಯಾಕ್ಸಿನೇಷನ್ ಡ್ರೈವ್ ಮುನ್ನಡೆಸುವಂತೆ ಸಲಹೆ ನೀಡಿದ್ದಾರೆ.
ಸೌಮ್ಯ ರೋಗಲಕ್ಷಣ ಕಂಡುಬಂದರೂ ಕೂಡ ಜನರನ್ನು ಪರೀಕ್ಷೆಗೆ ಒಳಗಾಗುವಂತೆ ಸರಪಂಚರು ಪ್ರೇರೇಪಿಸಬೇಕು. ಕೊರೊನಾದಿಂದ ಬಳಲುತ್ತಿರುವ ಜನರಿಗೆ ಚಿಕಿತ್ಸೆ ನೀಡಲು ಪಂಚಾಯಿತಿ ನಿಧಿಯಿಂದ ದಿನಕ್ಕೆ 5000 ರೂ. ಬಳಸಿಕೊಳ್ಳುವಂತೆ ತಿಳಿಸಿದ್ದಾರೆ.
ವಿಶೇಷ ಅಭಿಯಾನದ ಮೂಲಕ ಕೊರೋನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಲು ತಿಳಿಸಿದ್ದು, ಲಸಿಕೆ ಪಡೆದುಕೊಳ್ಳುವಂತೆ ಗ್ರಾಮದ ಎಲ್ಲಾ ಜನರಿಗೆ ಪ್ರೇರೇಪಿಸಲು ಹೇಳಿದ್ದಾರೆ.