ಎಂಟು ಸಾವಿರ ರೂಪಾಯಿ ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ವೈದ್ಯನ ಮನೆ ಮೇಲೆ ದಾಳಿ ಮಾಡಿದ ಅಧಿಕಾರಿಗಳೇ ಆಶ್ಚರ್ಯಗೊಂಡಿದ್ದಾರೆ. ಸಾವಿರದಲ್ಲಿ ಲಂಚ ಪಡೆದ ವೈದ್ಯನ ಮನೆಯಲ್ಲಿ ಕೋಟ್ಯಾಂತರ ರೂಪಾಯಿ ಮೌಲ್ಯದ ಕಂತೆ ಕಂತೆ ನೋಟುಗಳು ಪತ್ತೆಯಾಗಿವೆ.
ಹೌದು, ಒಡಿಶಾದ ಭುವನೇಶ್ವರ ಪ್ರದೇಶದಲ್ಲಿರುವ ವೈದ್ಯರೊಬ್ಬರ ಮನೆ ಮೇಲೆ ದಾಳಿ ನಡೆಸಿದ ಅಧಿಕಾರಿಗಳು 1.12 ಕೋಟಿ ರೂಪಾಯಿಯನ್ನು ವಶಪಡಿಸಿಕೊಂಡಿದ್ದಾರೆ. ಸರ್ಕಾರಿ ಸ್ತ್ರೀರೋಗ ತಜ್ಞರೊಬ್ಬರ ಮನೆಯಲ್ಲಿ ಇಷ್ಟು ದೊಡ್ಡ ಮೊತ್ತದ ಹಣ ಪತ್ತೆಯಾಗಿರುವುದು ದಿಗ್ಭ್ರಮೆಗೊಳಿಸಿದೆ.
ವೈದ್ಯನ ಮನೆ ಮೇಲೆ, ಆ್ಯಂಟಿ ಕರಪ್ಷನ್ ಬ್ಯೂರೋ ಗುರುವಾರ ಅಂದರೆ ಇಂದು ದಾಳಿ ನಡೆಸಿದೆ ಎಂದು ವರದಿಯಾಗಿದೆ. ಅಷ್ಟೇ ಅಲ್ಲಾ ಇತ್ತೀಚಿಗೆ ನಡೆಸಿದ ದಾಳಿಯಲ್ಲಿ ಅತಿ ಹೆಚ್ಚು ನಗದು ವಶಪಡಿಸಿಕೊಂಡ ಪ್ರಕರಣ ಇದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಟಿಕೆ ಗನ್ ಹಿಡಿದು ಬ್ಯಾಂಕಿಗೆ ಬಂದವನ ಹಿನ್ನಲೆ ತಿಳಿದು ಪೊಲೀಸರಿಗೆ ಶಾಕ್…!
ಒಡಿಶಾದ ಚರಿಚಕ್ಕ್ ಸಮುದಾಯ ಆರೋಗ್ಯ ಕೇಂದ್ರದಲ್ಲಿ (ಸಿಎಚ್‌ಸಿ) ಸ್ತ್ರೀರೋಗ ತಜ್ಞರಾಗಿರುವ ಡಾ. ಸುಕಾಂತ್ ಜೆನಾ, ಗರ್ಭಿಣಿ ಮಹಿಳೆ ಒಬ್ಬರ ಸಿಸೇರಿಯನ್ ಆಪರೇಷನ್ ಮಾಡಲು ಅವರ ಸಂಬಂಧಿಕರಿಂದ 8,000 ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟು, ಅದನ್ನು ಸ್ವೀಕರಿಸಿದ್ದಾರೆ.
ವೈದ್ಯರು ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ನಂತರ, ಭುವನೇಶ್ವರದಲ್ಲಿರುವ ಅವರ ಮನೆಯಲ್ಲಿ ಶೋಧ ನಡೆಸಲಾಯಿತು. ಆದರೆ ಅವರ ಮನೆಯಲ್ಲಿ ಇಷ್ಟು ದೊಡ್ಡ ಮೊತ್ತ ವಶಪಡಿಸಿಕೊಳ್ಳಬಹುದೆಂದು ಅಧಿಕಾರಿಗಳು ಸಹ ನಿರೀಕ್ಷಿಸಿರಲಿಲ್ಲ.