ಜೂನಿಯರ್ ಎನ್‌ಟಿಆರ್, ರಾಮ್ ಚರಣ್ ಅವರ ಬಿಗ್ ಹಿಟ್ ಚಿತ್ರಕ್ಕೆ ಸಲ್ಮಾನ್ ಖಾನ್ ಹೇಗೆ ಕಾರಣ ಎಂಬ ಅಂಶವನ್ನು ನಟಿ ರಾಖಿ ಸಾವಂತ್ ಬಹಿರಂಗಪಡಿಸಿದ್ದಾರೆ. ರಾಖಿ ಸಾವಂತ್‌ಗೆ ಇಂತಹ ಹೇಳಿಕೆ ನೀಡಲು ಪ್ರೇರೇಪಿಸಿದ್ದು ಏನು ? ಎಂದು ಪ್ರಶ್ನಿಸಿದರೆ ಬಿಗ್ ಬಾಸ್ ನಲ್ಲಿ ಆರ್ ಆರ್ ಆರ್ ತಂಡ ಭೇಟಿ ಕೊಟ್ಟಿದ್ದು.
ಆರ್‌ಆರ್‌ಆರ್‌ನ ಯಶಸ್ಸಿನ ಸಂಭ್ರಮಕ್ಕಾಗಿ ಚಿತ್ರದ ನಿರ್ದೇಶಕ ಎಸ್‌ಎಸ್ ರಾಜಮೌಳಿ ಮತ್ತು ಜೂನಿಯರ್ ಎನ್‌ಟಿಆರ್, ರಾಮ್ ಚರಣ್, ನಿರ್ಮಾಪಕ ಜಯಂತಿಲಾಲ್ ಅವರು ಮುಂಬೈನ ಸಹಾರಾ ಸ್ಟಾರ್ ಹೋಟೆಲ್‌ನಲ್ಲಿ ಬೃಹತ್ ಸಕ್ಸಸ್ ಮೀಟ್ ನಡೆಸಿದರು.
ಚಲನಚಿತ್ರ ಮತ್ತು ಅದರ ಬೃಹತ್ ಯಶಸ್ಸಿನ ಬಗ್ಗೆ ಹಲವಾರು ಪ್ರಶ್ನೆಗಳು ಅಲ್ಲಿ ಬಂದವು. ರಾಖಿ ಸಾವಂತ್ ಸೇರಿದಂತೆ ಇತರ ಹಲವಾರು ಸೆಲೆಬ್ರಿಟಿಗಳು ಆರ್ ಆರ್ ಆರ್ ಯಶಸ್ಸಿನ ಸಮಾರಂಭದಲ್ಲಿ ತಮ್ಮ ಉಪಸ್ಥಿತಿಯಿದ್ದು ಸಂಭ್ರಮಿಸಿದ್ದರು.
ಎಸ್ಎಸ್ ರಾಜಮೌಳಿ ಚಲನಚಿತ್ರವು ಗಳಿಸಿದ ಎಲ್ಲಾ ವಿಮರ್ಶೆ ಮತ್ತು ಪ್ರಶಸ್ತಿಗಳ ಹಿಂದೆ ಸಲ್ಮಾನ್ ಖಾನ್ ಪಾತ್ರ ಪ್ರಮುಖ ಎಂಬುದು ರಾಖಿ ಸಾವಂತ್ ಅಭಿಪ್ರಾಯ.
ಇಡೀ ಆರ್‌ಆರ್‌ಆರ್ ತಂಡ ಬಿಗ್ ಬಾಸ್‌ಗೆ ಬಂದಾಗ ನಾನು ಮನೆಯೊಳಗಿದ್ದೆ ಮತ್ತು ಇಡೀ ತಂಡವು ಹೊರಡುವ ಮೊದಲು ಸಲ್ಮಾನ್ ಅವರ ಆಶೀರ್ವಾದವನ್ನು ತೆಗೆದುಕೊಂಡಿತ್ತು. ಸಲ್ಮಾನ್ ಅವರ ತಲೆಯನ್ನು ಮುಟ್ಟಿ ಆಶೀರ್ವದಿಸಿದ್ದರು. ಈಗ ಚಿತ್ರವು 1000 ಕೋಟಿ ರೂ. ಹಣ ಗಳಿಸಿದೆ, ನೋಡಿ ಸಲ್ಮಾನ್‌ಜಿಯ ಪ್ರೀತಿಯೂ ಹಾಗೆಯೇ ಎಂದು ರಾಖಿ ಹೇಳಿದ್ದಾರೆ.