
ಜೂನಿಯರ್ ಎನ್ಟಿಆರ್ ಮತ್ತು ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಅಭಿನಯದ ‘RRR’ 2022 ಮಾರ್ಚ್ 22 ರಂದು ವಿಶ್ವದಾದ್ಯಂತ ತೆರೆಕಂಡಿತ್ತು. ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುವ ಮೂಲಕ ಹೊಸ ದಾಖಲೆ ಬರೆಯಿತು. ಈ ಸಿನಿಮಾ ಇದೀಗ ಮೇ ಹತ್ತಕ್ಕೆ ಮರು ಬಿಡುಗಡೆಯಾಗಲಿದೆ. ಈ ಕುರಿತು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದೆ.
ವಿಜಯೇಂದ್ರ ಪ್ರಸಾದ್ ಕಥೆ ಬರೆದಿರುವ ಈ ಚಿತ್ರವನ್ನು ರಾಜಮೌಳಿ ನಿರ್ದೇಶಿಸಿದ್ದು, ಜೂನಿಯರ್ ಎನ್ಟಿಆರ್ ಮತ್ತು ರಾಮ್ ಚರಣ್ ಸೇರಿದಂತೆ ಅಜಯ್ ದೇವಗನ್, ಆಲಿಯಾ ಭಟ್, ಒಲಿವಿಯ ಮಾರಿಸ್, ರಾಯ್ ಸ್ಟೀವನ್ ಸನ್, ಛತ್ರಪತಿ ಶೇಖರ್, ಮಕರಂದ್ ದೇಶಪಾಂಡೆ, ರಾಹುಲ್ ರಾಮಕೃಷ್ಣ ತೆರೆ ಹಂಚಿಕೊಂಡಿದ್ದಾರೆ. ಶ್ರೀಕಾರ್ ಪ್ರಸಾದ್ ಸಂಕಲನ, ಸೆಂಥಿಲ್ ಕುಮಾರ್ ಛಾಯಾಗ್ರಣವಿದೆ. ಡಿ ವಿ ವಿ ಎಂಟರ್ಟೈನ್ಮೆಂಟ್ ಬ್ಯಾನರ್ ನಲ್ಲಿ ಡಿ ವಿ ವಿ ದಾನಯ್ಯ ನಿರ್ಮಾಣ ಮಾಡಿದ್ದಾರೆ. ಎಂಎಂ ಕೀರವಾಣಿ ಸಂಗೀತ ಸಂಯೋಜನೆ ನೀಡಿದ್ದಾರೆ.
