ರಾಜ ಮೌಳಿ ನಿರ್ದೇಶನದ ಆಸ್ಕರ್ ವಿಜೇತ ಚಲನಚಿತ್ರ ಆರ್ ಆರ್ ಆರ್ ನಲ್ಲಿ ಕಾಣಿಸಿಕೊಂಡಿದ್ದ ನಟ ರೇ ಸ್ಟೀವನ್ ಸನ್ ಭಾನುವಾರದಂದು ವಿಧಿವಶರಾಗಿದ್ದಾರೆ. 58 ವರ್ಷದ ಸ್ಟೀವನ್ ಸನ್ ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದ್ದು, ಖಚಿತ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.
ರೇ ಸ್ಟೀವನ್ ಸನ್ ಅವರ ನಿಧನಕ್ಕೆ ಆರ್ ಆರ್ ಆರ್ ಚಿತ್ರತಂಡ ಆಘಾತ ವ್ಯಕ್ತಪಡಿಸಿದ್ದು, ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಈ ಕುರಿತಂತೆ ಶೋಕ ಸಂದೇಶ ಹಾಕಿದೆ.
ಆರ್ ಆರ್ ಆರ್ ಚಿತ್ರದಲ್ಲಿ ಸ್ಟೀವನ್ ಸನ್ ನೆಗೆಟಿವ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದು, ಈ ಚಿತ್ರದ ನಾಟು ನಾಟು ಹಾಡು ಅತ್ಯುತ್ತಮ ಸಂಗೀತ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿಗೆ ಭಾಜನವಾಗಿತ್ತು.
ಮೇ 25, 1964 ರಲ್ಲಿ ಉತ್ತರ ಐರ್ಲೆಂಡ್ ನ ಲಿಸ್ಟ್ ಬರ್ನಲ್ಲಿ ಜನಿಸಿದ್ದ ರೇ ಸ್ಟಿವನ್ ಸನ್ 1990 ರಲ್ಲಿ ದೂರದರ್ಶನ ಮೂಲಕ ಮನರಂಜನ ಕ್ಷೇತ್ರ ಪ್ರವೇಶಿಸಿದ್ದರು. ಆ ಬಳಿಕ ಭಾರತದ ಚಿತ್ರಗಳು ಸೇರಿದಂತೆ ಹಲವು ಭಾಷೆಗಳಲ್ಲಿ ಅವರು ನಟಿಸಿದ್ದಾರೆ.