ಕೆಟ್ಟ ಸುದ್ದಿಗಳಿಂದಲೆ ಮುಖ್ಯ ಭೂಮಿಕೆಯಲ್ಲಿರೊ ಕೆಆರ್ಕೆ ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಕಬೀರ್ ಖಾನ್ ಅವರ 83 ಚಿತ್ರವನ್ನ ವಿಮರ್ಶಿಸಿ ವಿವಾದ ಮೈಮೇಲೆ ಎಳೆದುಕೊಂಡಿದ್ದ ಕಮಾಲ್ ಖಾನ್ ಈಗ, RRR ಚಿತ್ರದ ಬೆನ್ನತ್ತಿದ್ದಾರೆ.
ಎಸ್ಎಸ್ ರಾಜಮೌಳಿ ಅವರಿಗೆ ಎಚ್ಚರಿಕೆಯ ಮಾತುಗಳನ್ನು ಹೇಳಿರುವ ಕೆಆರ್ಕೆ, ಆಲಿಯಾ ಭಟ್ ಅವರನ್ನು ಪ್ರಾಜೆಕ್ಟ್ನಿಂದ ತೆಗೆದು ಹಾಕಿ ಎಂದಿದ್ದಾರೆ. RRR ಚಿತ್ರಕ್ಕೆ ಆಲಿಯಾ ಭಟ್ ನಿಂದ ಬ್ಯಾಡ್ ಲಕ್ ಎದುರಾಗಿದೆ. ಆಲಿಯಾ ‘ದುರದೃಷ್ಟ’ ಎಂದು ಕರೆದಿರುವ ಕೆಆರ್ಕೆ ಚಿತ್ರ ವಿಳಂಭಕ್ಕೆ ಆಲಿಯಾ ಬ್ಯಾಡ್ ಲಕ್ ಕಾರಣ ಎಂದಿದ್ದಾರೆ.
ಎಡಿಟಿಂಗ್ ಮೂಲಕ ಆಲಿಯಾಳನ್ನು ತೆಗೆದುಹಾಕಿ ಎಂದು ರಾಜಮೌಳಿಯನ್ನ ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ. ಆಲಿಯಾ ಭಟ್ ಅನ್ನು ಪ್ಲಾಪ್ ನಟಿ ಎಂದಿರುವ ಕೆಆರ್ಕೆ RRR ಚಿತ್ರದಲ್ಲಿ ಆಲಿಯಾ ಇಲ್ಲದಿದ್ದರೆ, ನಿಮ್ಮ ಚಿತ್ರ ಯಾವುದೇ ತೊಂದರೆಯಿಲ್ಲದೆ ಬಿಡುಗಡೆಯಾಗಬಹುದಿತ್ತು. ಅವಳಿಗೂ ಚಿಕ್ಕ ಪಾತ್ರವನ್ನು ನೀಡಿ ನೀವು ದೊಡ್ಡ ತಪ್ಪು ಮಾಡಿದ್ದೀರಿ. ಆಲಿಯಾ ಭಟ್ RRR ಚಿತ್ರದಲ್ಲಿ ನಿಖರವಾಗಿ ಕೇವಲ 5 ನಿಮಿಷಗಳ ಪಾತ್ರವನ್ನು ನಿರ್ವಹಿಸುತ್ತಿದ್ದಾಳೆ, ಆದರೆ ಪ್ರಮೋಷನ್ ಗಾಗಿ ಎಲ್ಲಾ ಕಡೆ ಓಡಾಡುತ್ತಿರುವುದು ಬಿಟ್ಟಿ ಪ್ರಚಾರಕ್ಕಾಗಿ ಎಂದು ವಿವಾದಾತ್ಮಕ ಟ್ವೀಟ್ ಮಾಡಿದ್ದಾರೆ.
ಕಮಾಲ್ ಖಾನ್ ನ ಈ ಟ್ವೀಟ್ ಗೆ ಆಲಿಯಾ ಅಭಿಮಾನಿಗಳು ಹಾಗೂ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿನ್ನ ಮೇಲೆ ದಾಖಲಾಗಿರುವ ಕಾನೂನು ಮೊಕದ್ದಮೆಗಳನ್ನು ಮೊದಲು ಬಗೆಹರಿಸಿಕೊ ಎಂದು ವಾಗ್ದಾಳಿ ನಡೆಸಿದ್ದಾರೆ. ಈತ ಸಾಮಾಜಿಕ ಮಾಧ್ಯಮದಲ್ಲಿ, ದ್ವೇಷ ಮತ್ತು ನಕಾರಾತ್ಮಕತೆಯನ್ನು ಹರಡುತ್ತಿದ್ದಾರೆ ಎಂದು ಆರೋಪಿಸಿರುವ ಹಲವರು ಕೆಆರ್ಕೆಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.