ನವದೆಹಲಿ: ಉತ್ತರಪ್ರದೇಶ ಚುನಾವಣೆ ಹೊತ್ತಲ್ಲೇ ಕಾಂಗ್ರೆಸ್ ಪಕ್ಷಕ್ಕೆ ಮತ್ತೊಂದು ಶಾಕ್ ಎದುರಾಗಿದೆ. ಕೇಂದ್ರದ ಮಾಜಿ ಸಚಿವ, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ಪಕ್ಷದ ನಾಯಕ ಆರ್.ಪಿ.ಎನ್. ಸಿಂಗ್ ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
32 ವರ್ಷ ನಾನು ಕಾಂಗ್ರೆಸ್ ಪಕ್ಷದಲ್ಲಿದ್ದೆ. ಮೊದಲಿನಂತೆ ಕಾಂಗ್ರೆಸ್ ಪಕ್ಷ ಈಗ ಇಲ್ಲವಾಗಿದೆ. ಹೀಗಾಗಿ ಕಾರ್ಯಕರ್ತನಾಗಿ ಬಿಜೆಪಿ ಸೇರುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.
ಆರ್.ಪಿ.ಎನ್. ಸಿಂಗ್ ಕಾಂಗ್ರೆಸ್ ಪಕ್ಷ ತೊರೆದ ಹೊತ್ತಲ್ಲೇ ಪಕ್ಷದ ಮಾಜಿ ಸಂಸದ ಆನಂದ್ ಗೌತಮ್ ಕೂಡ ಕಾಂಗ್ರೆಸ್ ಗೆ ರಾಜೀನಾಮೆ ನೀಡಿದ್ದಾರೆ. ವಿಧಾನಸಭೆ ಚುನಾವಣೆ ನಡೆಯುತ್ತಿರುವ ಉತ್ತರಪ್ರದೇಶದಲ್ಲಿ ಜಿತಿನ್ ಪ್ರಸಾದ್ ಪಕ್ಷ ಬಿಟ್ಟ ನಂತರ ಕಾಂಗ್ರೆಸ್ ಗೆ ದೊಡ್ಡ ಆಘಾತ ಇದಾಗಿದೆ.