alex Certify 2021ರಲ್ಲಿ ರೈಲ್ವೆ ಪೊಲೀಸರು ರಕ್ಷಿಸಿದ್ದು ಒಟ್ಟು 601 ಜೀವಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

2021ರಲ್ಲಿ ರೈಲ್ವೆ ಪೊಲೀಸರು ರಕ್ಷಿಸಿದ್ದು ಒಟ್ಟು 601 ಜೀವಗಳು

ದೇಶದಲ್ಲಿ ಅತಿದೊಡ್ಡ ಸಂಚಾರ ಸೇವೆಯಾಗಿರುವ ರೈಲ್ವೆ ಇಲಾಖೆಯು ವಿಶ್ವದಲ್ಲೇ ಅತ್ಯಂತ ಬೃಹತ್‌ ಎನ್ನಲಾದ ರೈಲುಗಳ ಜಾಲವನ್ನು ನಿರ್ವಹಿಸುತ್ತಿದೆ.

ಇಂಥ ಬೃಹತ್‌ ರೈಲ್ವೆ ಇಲಾಖೆಗೆ ತನ್ನ ಸ್ವತ್ತುಗಳ ರಕ್ಷಣೆ, ಪ್ರಯಾಣಿಕರ ಸುರಕ್ಷತೆಗಾಗಿ ಪ್ರತ್ಯೇಕ ಪೊಲೀಸ್‌ ಪಡೆಯೇ ಇದೆ. ಅದರ ಹೆಸರು ರೈಲ್ವೆ ಪೊಲೀಸ್‌ ಫೋರ್ಸ್‌ (ಆರ್‌ಪಿಎಫ್‌).

ಈ ಪೊಲೀಸರು ದೇಶದ ಎಲ್ಲ ರೈಲು ನಿಲ್ದಾಣಗಳಲ್ಲಿ ಕರ್ತವ್ಯಕ್ಕೆ ನಿಯೋಜಿತರಾಗಿದ್ದಾರೆ. 2021ರಲ್ಲಿ ಈ ಪೊಲೀಸರು ಒಟ್ಟು 601 ಜನರ ಪ್ರಾಣರಕ್ಷಣೆ ಮಾಡಿದ್ದಾರೆ. ಆತ್ಮಹತ್ಯೆ ಯತ್ನ ಹಾಗೂ ಅವಘಡಗಳಲ್ಲಿ ಜೀವ ಕಳೆದುಕೊಳ್ಳುತ್ತಿದ್ದವರನ್ನು ರಕ್ಷಿಸಿದ್ದಾರೆ.

ಬಹಳ ಮುಖ್ಯವಾಗಿ ಮಾನವ ಕಳ್ಳಸಾಗಣೆ ಜಾಲಕ್ಕೆ ಸಿಕ್ಕಿದ್ದ 630 ಜನರನ್ನು ರಕ್ಷಿಸಿ, ಮನೆಗಳಿಗೆ ಕಳುಹಿಸಿಕೊಟ್ಟಿರುವ ಪುಣ್ಯಾತ್ಮರು ’’ಆರ್‌ಪಿಎಫ್‌’’ ಸಿಬ್ಬಂದಿ.

ಪೋಷಕರಿಂದ ತಪ್ಪಿಸಿಕೊಂಡ ಮಕ್ಕಳು, ಸಂಬಂಧಿಕರಿಂದ ದೂರ ತಳ್ಳಲಾದ ಮಕ್ಕಳು, ಕಳ್ಳರ ಕೈಗೆ ಸಿಕ್ಕ ಮಕ್ಕಳು ಸೇರಿದಂತೆ ಒಟ್ಟಾರೆ 11,900 ಮಕ್ಕಳನ್ನು ಕಳೆದ ಒಂದೇ ವರ್ಷದಲ್ಲಿ ಆರ್‌ಪಿಎಫ್‌ ರಕ್ಷಣೆ ಮಾಡಿದೆ. ಬಹುತೇಕರನ್ನು ಕುಟುಂಬಸ್ಥರಿಗೆ ಒಪ್ಪಿಸಿದರೆ, ಉಳಿದ ಮಕ್ಕಳನ್ನು ಪೋಷಣಾ ಕೇಂದ್ರಗಳಿಗೆ, ಅನಾಥಾಶ್ರಮಗಳಿಗೆ ಒಪ್ಪಿಸಿ ಸೂಕ್ತ ನಿಗಾ ಇರಿಸಲಾಗಿದೆ. ರೈಲ್ವೆಯಲ್ಲಿ ಮಕ್ಕಳ ರಕ್ಷಣೆಗಾಗಿಯೇ ’’132’’ ಸಹಾಯವಾಣಿ ಸಕ್ರಿಯವಾಗಿದೆ.

ರೈಲ್ವೆ ಚಾಲಕನ ಸಮಯಪ್ರಜ್ಞೆಯಿಂದ ಉಳಿಯಿತು ವ್ಯಕ್ತಿ ಜೀವ

ಉಳಿದಂತೆ ಪ್ರಯಾಣಿಕರ ಬಳಿ ದೋಚಲು ಯತ್ನಿಸಿ, ಅವರಿಂದ ಗೂಸಾ ತಿಂದ ಬಳಿಕ ಪೊಲೀಸರಿಗೆ ಒಪ್ಪಿಸಲಾದ ಅಪರಾಧಿಗಳ ಸಂಖ್ಯೆ ಸುಮಾರು ಮೂರು ಸಾವಿರ.

ಪ್ರಯಾಣಕ್ಕೆ ಸರಿಯಾಗಿ ಟಿಕೆಟ್‌ ಪಡೆಯದೇ ಕಳ್ಳತನದಿಂದ ರೈಲುಗಳಲ್ಲಿ ಪ್ರಯಾಣಿಸುತ್ತಿರುವ ವೇಳೆ ಪೊಲೀಸರಿಗೆ ಸಿಕ್ಕಿಬಿದ್ದವರ ಸಂಖ್ಯೆ 25 ಸಾವಿರಕ್ಕೂ ಅಧಿಕವಂತೆ.

ಬಹಳ ಮುಖ್ಯವಾಗಿ ರೈಲ್ವೆ ಪ್ರಯಾಣ, ರೈಲು ನಿಲ್ದಾಣಗಳಲ್ಲಿ ತಮಗೆ ಉಂಟಾದ ಸಮಸ್ಯೆಗಳನ್ನು ಪರಿಹರಿಸಲು 2021ರಲ್ಲಿ 80 ಸಾವಿರಕ್ಕೂ ಹೆಚ್ಚು ದೂರುಗಳು/ಕರೆಗಳು ಇಲಾಖೆಗೆ ಬಂದಿವೆ. ಟ್ವಿಟರ್‌ ಮೂಲಕ ಹಾಗೂ 139 ಸಹಾಯವಾಣಿಗೆ ದೂರು ಸಲ್ಲಿಸಲಾಗಿದೆ. ಇವೆಲ್ಲವುಗಳನ್ನು ಇಲಾಖೆ ಬಗೆಹರಿಸಿದೆ.

ಇನ್ನು, ಕೊರೊನಾ ಸೋಂಕಿಗೆ ತುತ್ತಾಗಿ 26 ಆರ್‌ಪಿಎಫ್‌ ಸಿಬ್ಬಂದಿ ಕರ್ತವ್ಯ ವೇಳೆ ಮೃತಪಟ್ಟಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ 1,650 ಜನರನ್ನು ಸಾವಿನ ದವಡೆಯಿಂದ ರಕ್ಷಿಸಿದ ಕೀರ್ತಿ ಆರ್‌ಪಿಎಫ್‌ ಪಡೆಗೆ ಸಲ್ಲುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...