ನವದೆಹಲಿ: ರೈಲ್ವೆ ಸುರಕ್ಷತಾ ಪಡೆ –ಆರ್.ಪಿ.ಎಫ್.ನಲ್ಲಿ 20000 ಕಾನ್ಸ್ಟೇಬಲ್ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ ಎಂದು ಹೇಳಲಾಗಿದ್ದು, ಇದು ನಕಲಿ ಅಧಿಸೂಚನೆಯಾಗಿದೆ ಎಂದು ರೈಲ್ವೆ ಸಚಿವಾಲಯ ಸ್ಪಷ್ಟಪಡಿಸಿದೆ.
ಸಾಮಾಜಿಕ ಜಾಲತಾಣಗಳಲ್ಲಿ 20000 ಆರ್.ಪಿ.ಎಫ್. ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿರುವುದಾಗಿ ಹರಿದಾಡುತ್ತಿರುವ ಮಾಹಿತಿ ಸುಳ್ಳು. ಇಂತಹ ಅಧಿ ಸೂಚನೆಯನ್ನು ಆರ್ಪಿಎಫ್ ಅಥವಾ ರೈಲ್ವೆ ಇಲಾಖೆ ಹೊರಡಿಸಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.