ರಾಯಲ್ ಎನ್‌ಫೀಲ್ಡ್ ಸ್ಕ್ರಾಮ್ 411 ವಾಸ್ತವವಾಗಿ ಹಿಮಾಲಯನ್ ಟೂರರ್ ನಂತೆಯೆ ಡಿಸೈನ್ ಆಗಿದೆ. ಆದರೆ ಈ ಆವೃತ್ತಿಯು ಹೆಚ್ಚು ರಸ್ತೆ ಕೇಂದ್ರಿಕೃತವಾಗಿದೆ. ಸ್ಕ್ರಾಮ್ 411 ನ ಒಟ್ಟಾರೆ ವಿನ್ಯಾಸವು ಹಿಮಾಲಯನ್ ನಂತೆಯೇ ಇದೆ ಆದರೆ, ಇದು ಅದಕ್ಕಿಂತ ಚಿಕ್ಕದಾದ ಚಕ್ರಗಳನ್ನು ಪಡೆಯುವ ಸಾಧ್ಯತೆಯಿದೆ.
ಮೋಟಾರ್ ಸೈಕಲ್‌ನಲ್ಲಿ ಸ್ಥಾಪಿಸಲಾದ ಎಂಜಿನ್ ಮತ್ತು ಸಸ್ಪೆನ್ಷನ್ ಕೂಡ ಹಿಮಾಲಯದಂತೆಯೇ ಇರುವ ಸಾಧ್ಯತೆಯಿದೆ. ಸ್ಕ್ರಾಮ್ 411 ಈ ಫೆಬ್ರವರಿಯಲ್ಲಿ ಬಿಡುಗಡೆಯಾಗಲಿದೆ.
ಸೂಪರ್ ಮೆಟಿಯಾರ್ 650 (Super meteor 650)
ರಾಯಲ್ ಎನ್ಫೀಲ್ಡ್ ನ ಈ 650-ಸಿಸಿ ಕ್ರೂಸರ್ ಮೋಟಾರ್‌ಸೈಕಲ್ ಅನ್ನು ವ್ಯಾಪಕವಾಗಿ ಪರೀಕ್ಷಿಸಲಾಗುತ್ತಿದೆ. ಈ 65-cc ಕ್ರೂಸರ್, ತಯಾರಕರ ಪ್ರಸಿದ್ಧ 650-cc ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಸೂಪರ್ ಮೆಟಿಯರ್ 650 ಅನ್ನು ಇಂಟರ್‌ಸೆಪ್ಟರ್ 650 ಗಿಂತ ಪ್ರೀಮಿಯಂ ಮಾಡೆಲ್‌ನಂತೆ ನೀಡಲಾಗುವುದು. ಸೂಪರ್ ಮೆಟಿಯಾರ್ ಅನ್ನು ಭಾರತದಲ್ಲಿ ಈ ವರ್ಷದ ಏಪ್ರಿಲ್ ತಿಂಗಳಲ್ಲಿ ಲಾಂಚ್ ಮಾಡಬಹುದು ಎನ್ನಲಾಗ್ತಿದೆ.
ಹಂಟರ್ (Hunter)
ರಾಯಲ್ ಎನ್‌ಫೀಲ್ಡ್ 350-ಸಿಸಿ ರೋಡ್ ಸ್ಟರ್ ಮೋಟಾರ್ ಸೈಕಲ್ ಅನ್ನು ಅಭಿವೃದ್ಧಿಪಡಿಸುತ್ತಿದೆ. ಇದನ್ನು ಪ್ರಸ್ತುತ ಹಂಟರ್ ಎಂದು ಕರೆಯಲಾಗುತ್ತಿದೆ ಆದರೆ, ಮಾರ್ಕೆಟ್ ಸಾಲಿಗೆ ಬಂದಾಗ ಮೋಟಾರ್ ಸೈಕಲ್‌ನ ಹೆಸರು ಬದಲಾಗಬಹುದು. ಈ ಮಾದರಿಯನ್ನು ರಾಯಲ್ ಎನ್ಫೀಲ್ಡ್ ನ ಬಜೆಟ್ ಬೈಕ್ ಎಂದು ಹೇಳಲಾಗ್ತಿದ್ದು, ಮಧ್ಯಮ ವರ್ಗದವರಿಗೂ ಕೈಗೆಟುಕುವ ಬೆಲೆಯಲ್ಲಿ ಸಿಗುತ್ತದೆ ಎಂಬ ಲೆಕ್ಕಾಚಾರ ಹಾಕಲಾಗಿದೆ. ಇದರ ಮಾರಾಟ ಈ ವರ್ಷದ ಮಧ್ಯದಲ್ಲಿ ಶುರುವಾಗಬಹುದು ಎಂದು ವರದಿಯಾಗಿದೆ.
ಶಾಟ್‌ಗನ್ 650 (Shotgun 650)
ಇ ಶಾಟ್‌ಗನ್ 650 ವಾಸ್ತವವಾಗಿ ಸಿಂಗಲ್ ಸೀಟರ್ ಆಗಿದೆ. SG650 ಹೆಸರಿನ ಈ ಮೋಟಾರ್ ಸೈಕಲ್‌ನ ಪರಿಕಲ್ಪನೆಯನ್ನು 2021 ರಲ್ಲಿ ಪ್ರದರ್ಶಿಸಲಾಯಿತು. ಈ ಮೋಟಾರ್ ಸೈಕಲ್ ಇಂಟರ್‌ಸೆಪ್ಟರ್ 650 ಮತ್ತು ಕಾಂಟಿನೆಂಟಲ್ GT 650 ನಂತೆ ಅವಳಿ ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ. ಈ ವರ್ಷದ ನಂತರ ಭಾರತೀಯ ಮಾರುಕಟ್ಟೆಯಲ್ಲಿ ಶಾಟ್‌ಗನ್ 650 ಅನ್ನು ಬಿಡುಗಡೆಯಾಗುವ ನಿರೀಕ್ಷೆಯಿದೆ.