ರಾಯಲ್ ಎನ್‌ಫೀಲ್ಡ್‌ನಿಂದ ಮುಂದಿನ ಮೋಟಾರ್‌ಸೈಕಲ್ ಆಗಿ ಸ್ಕ್ರ್ಯಾಮ್ 411 ಬರುತ್ತಿದೆ. ಬಿಳಿ, ಕೆಂಪು ಮತ್ತು ಕಪ್ಪು ಬಣ್ಣಗಳಲ್ಲಿರುವ ಹೊಸ ಮೋಟಾರ್ ಸೈಕಲ್‌ನ ಫೋಟೋಗಳನ್ನು ಕಂಪನಿಯ ಶೋ ರೂಂಗಳಲ್ಲಿ ಬಿತ್ತರಿಸಲಾಗಿದೆ.
ಈ ಬೈಕ್‌ಗಳ ಜೊತೆಗೆ ಕೀ ಚೈನ್‌ಗಳು, ಟೀ ಶರ್ಟ್‌ಗಳಂತಹ ಉಡುಪುಗಳು ಸಹ ಶೋರೂಮ್‌ಗಳಿಗೆ ಬಂದಿವೆ. ಅದಕ್ಕೂ ಮುನ್ನ ಬೈಕ್‌ನ ಬ್ರೌಷರ್ ಸೋರಿಕೆಯಾಗಿ ಬೈಕ್‌ನ ವಿವರ ಬಹಿರಂಗವಾಗಿದೆ. ಇದರೊಂದಿಗೆ ಬೈಕ್‌ನ ವಿನ್ಯಾಸದ ವಿವರಗಳನ್ನು ಸಹ ಬಹಿರಂಗಪಡಿಸುವ ಮೋಟಾರ್ ಸೈಕಲ್‌ನ ಹಲವಾರು ಸ್ಪೈ ಶಾಟ್‌ಗಳು ಕಂಡುಬಂದಿವೆ.
ಸ್ಕ್ರಾಮ್ 411 ರಾಯಲ್ ಎನ್‌ಫೀಲ್ಡ್ ಹಿಮಾಲಯನ್‌ನೊಂದಿಗೆ ಗಮನಾರ್ಹ ಹೋಲಿಕೆಯನ್ನು ಹೊಂದಿದೆ. ಹಿಮಾಲಯನ್‌ನಂತೆಯೇ ಮೂಲ ರೂಪ ಮತ್ತು ಸಿಲೂಯೆಟ್ ಹೊಂದಿದೆ ಸ್ಕ್ರಾಮ್ 411. ರೌಂಡ್ ಹೆಡ್‌ಲೈಟ್, ರಿಯರ್‌ವ್ಯೂ ಮಿರರ್‌ಗಳು, ವಿಶಾಲವಾದ ಹ್ಯಾಂಡಲ್ ಬಾರ್, ಫೋರ್ಕ್ ಗೈಟರ್‌ಗಳು ಮತ್ತು ವಿಶಿಷ್ಟವಾದ ಇಂಧನ ಟ್ಯಾಂಕ್‌ನಂತಹ ವಿವರಗಳನ್ನು ಹಿಮಾಲಯ್‌ನಿಂದ ಪ್ರೇರಣೆ ಪಡೆಯಲಾಗಿದೆ. ಸ್ಕ್ರ್ಯಾಮ್‌ನಲ್ಲಿ ಸ್ಪ್ಲಿಟ್ ಸೀಟ್‌ಗಳ ಬದಲಿಗೆ ಸಿಂಗಲ್-ಪೀಸ್ ಸೀಟ್ ಕೊಡಲಾಗಿದ್ದು, ಇದು ಆಫ್-ರೋಡ್ ಹಿಮಾಲಯನ್‌ಗೆ ಹೋಲಿಕೆ ಮಾಡಿದಲ್ಲಿ ಕಂಡು ಬರುವ ಗಮನಾರ್ಹ ವ್ಯತ್ಯಾಸವಾಗಿದೆ.
ಹೊಸ ಹಿಮಾಲಯನ್‌ನೊಂದಿಗೆ ಹೋಲಿಕೆಗಳನ್ನು ಹೊರತುಪಡಿಸಿ, ಕೆಲವು ವ್ಯತ್ಯಾಸಗಳನ್ನೂ ಸಹ ಸ್ಕ್ರಾಮ್‌ನಲ್ಲಿ ಕಾಣಬಹುದು. ಉದಾಹರಣೆಗೆ, ಕಪ್ಪು ಹೆಡ್‌ಲ್ಯಾಂಪ್ ಆವರಣವು ಕಬ್ಬಿಣದಿಂದ ಮಾಡಲ್ಪಟ್ಟಿದೆ ಮತ್ತು ವಿಶಿಷ್ಟ ಲುಕ್ ಹೊಂದಿದೆ. ಇದು ಮುಂಭಾಗದಲ್ಲಿ ಎತ್ತರದ ವಿಂಡ್‌ಸ್ಕ್ರೀನ್ ಸಹ ಇಲ್ಲ. ಚಿಕ್ಕ ಲಗೇಜ್ ರ‍್ಯಾಕ್ ಬದಲಿಗೆ ಹಿಂಭಾಗದಲ್ಲಿ ಸರಳವಾದ ಸಿಂಗಲ್-ಪೀಸ್ ಗ್ರಾಬ್ ರೈಲ್ ನೀಡಲಾಗಿದೆ. ಸ್ಕ್ರ್ಯಾಮ್ 411 ಅರ್ಬನ್ ಲೋಗೋ ಪ್ಲೇಟ್ ಹೊಂದಿದ್ದು ಅದರ ಬ್ರ್ಯಾಂಡಿಂಗ್ ಅನ್ನು ಪೆಟ್ರೋಲ್ ಟ್ಯಾಂಕ್‌ನ ಎರಡೂ ಬದಿಗಳಲ್ಲಿ ಕೊಡಲಾಗಿದ್ದು, ಇದು ಬೈಕ್‌ಗೆ ವಿಶಿಷ್ಟ ಲುಕ್ ಕೊಡುತ್ತದೆ.
ಸ್ಕ್ರ್ಯಾಮ್‌ನಲ್ಲಿನ ಹಾರ್ಡ್‌ವೇರ್‌ಗಳ ವಿಚಾರಕ್ಕ ಬರೋದಾದರೆ; ಮುಂಭಾಗದ ತುದಿಯಲ್ಲಿ ಟೆಲಿಸ್ಕೋಪಿಕ್ ಫೋರ್ಕ್‌ಗಳನ್ನು ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್ ನಿರೀಕ್ಷಿಸಲಾಗಿದೆ. ಬ್ರೇಕಿಂಗ್ ಅನ್ನು ಮುಂಭಾಗದಲ್ಲಿ 300 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ 240 ಎಂಎಂ ಡಿಸ್ಕ್‌ಗಳಿಂದ ನಿಯಂತ್ರಿಸಲಾಗುತ್ತದೆ. ಬೈಕಿಗೆ 19 ಇಂಚಿನ ಮುಂಭಾಗದ ಚಕ್ರ ಅಳವಡಿಸಲಾಗಿದೆ. ಚಕ್ರಗಳನ್ನು ಕವರ್ ಮಾಡಲು ಇದು ಬ್ಲಾಕ್ ಪ್ಯಾಟರ್ನ್‌ಗಳೊಂದಿಗೆ ಡ್ಯುಯಲ್-ಪರ್ಪಸ್ ಟೈರ್‌ಗಳನ್ನು ಪಡೆದುಕೊಂಡಿದೆ.
411ಸಿಸಿ ಸಿಂಗಲ್-ಸಿಲಿಂಡರ್ ಏರ್-ಕೂಲ್ಡ್ ಎಸ್‌ಓಎಚ್‌ಸಿಯಿಂದ ಬೈಕಿಗೆ ಶಕ್ತಿಯನ್ನು ಉತ್ಪಾದಿಸಲಾಗುತ್ತದೆ. 5-ಸ್ಪೀಡ್ ಗೇರ್‌ಬಾಕ್ಸ್ ಜೊತೆಗೆ ಎಂಜಿನ್ 24.3 ಬಿಎಚ್‌ಪಿ ಮತ್ತು 32ಎನ್‌ಎಂ ಗರಿಷ್ಠ ಟಾರ್ಕ್ ಉತ್ಪಾದಿಸುತ್ತದೆ. ಆದಾಗ್ಯೂ, ಬೈಕಿನ ಕೆಲವೊಂದು ಆವೃತ್ತಿಗಳಿಗೆ ಎಂಜಿನ್‌ನ ಟ್ಯೂನಿಂಗ್ ಭಿನ್ನವಾಗಿರಬಹುದು.