ರಾಯಲ್ ಎನ್‌ಫೀಲ್ಡ್ ಅಕ್ಟೋಬರ್ 2023 ರಲ್ಲಿ 84,435 ಮೋಟಾರ್‌ಸೈಕಲ್‌ಗಳ ಮಾರಾಟ ಮಾಡುವ ಮೂಲಕ ದೇಶೀಯ ಮಾರುಕಟ್ಟೆಯಲ್ಲಿ ಬೇಡಿಕೆಯನ್ನು ಗಣನೀಯವಾಗಿ ಹೆಚ್ಚಿಸಿಕೊಂಡಿದೆ. ಹಿಂದಿನ ಹಣಕಾಸು ವರ್ಷದಲ್ಲಿ ಅದೇ ಅವಧಿಯಲ್ಲಿ ಮಾರಾಟವಾದ 82,235 ಮೋಟಾರ್‌ಸೈಕಲ್‌ಗಳಿಗೆ ಹೋಲಿಸಿದರೆ, ಒಟ್ಟಾರೆಯಾಗಿ ಶೇ.3 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ.
ಕಂಪನಿಯ ದೇಶೀಯ ಮಾರಾಟದಲ್ಲಿ ರಾಯಲ್ ಎನ್‌ಫೀಲ್ಡ್ ಅಕ್ಟೋಬರ್ 2023 ರಲ್ಲಿ 80,958 ಯುನಿಟ್‌ಗಳನ್ನು ಮಾರಾಟ ಮಾಡಿದ್ದು, ಅಕ್ಟೋಬರ್ 2022 ರಲ್ಲಿ 76,528 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಈ ಮೂಲಕ ಶೇ.6 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಅದೇ ಸಮಯದಲ್ಲಿ, ಕಂಪನಿಯ ರಫ್ತು ಶೇ.39 ರಷ್ಟು ಕುಸಿತ ಕಂಡಿದೆ.
ಹಬ್ಬದ ಸೀಸನ್ ಹತ್ತಿರದಲ್ಲಿದ್ದು, ಗ್ರಾಹಕರ ಭಾವನೆಯನ್ನು ನೋಡಿ ನಾವು ರೋಮಾಂಚನಗೊಂಡಿದ್ದೇವೆ. ಇತ್ತೀಚೆಗೆ ಬಿಡುಗಡೆ ಮಾಡಲಾದ ಬುಲೆಟ್ 350 ಉತ್ತಮ ಪ್ರತಿಕ್ರಿಯೆ ಬಂದಿದೆ. ಮುಂದಿನ ತಿಂಗಳು ವರ್ಷದ ಬಹು ನಿರೀಕ್ಷಿತ ಮೋಟಾರ್‌ಸೈಕಲ್ ಅನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲು ಸಿದ್ಧರಾಗಿದ್ದೇವೆ. ನಮ್ಮ ಮುಂಬರುವ ಮೋಟಾರ್‌ಸೈಕಲ್‌ಗಳು ನಮ್ಮ ಬೆಳವಣಿಗೆಯ ವೇಗವನ್ನು ಮತ್ತಷ್ಟು ಹೆಚ್ಚಿಸುತ್ತವೆ ಎಂಬ ವಿಶ್ವಾಸ ನಮಗಿದೆ ಎಂದು ರಾಯಲ್ ಎನ್‌ಫೀಲ್ಡ್‌ನ ಸಿಇಒ ಬಿ. ಗೋವಿಂದರಾಜನ್ ತಿಳಿಸಿದ್ರು.
ಅಲ್ಲದೆ, ರಾಯಲ್ ಎನ್‌ಫೀಲ್ಡ್‌ನ ಮೊದಲ ಮೋಟಾರ್‌ಸೈಕಲ್ ಲಿಕ್ವಿಡ್-ಕೂಲ್ಡ್ ಎಂಜಿನ್‌ನೊಂದಿಗೆ ಬಹುನಿರೀಕ್ಷಿತ ಹಿಮಾಲಯನ್ 450 ಅನ್ನು ಬಿಡುಗಡೆ ಮಾಡಲು ಕಂಪನಿಯು ಯೋಜಿಸುತ್ತಿದೆ.