
ಮಾರ್ಚ್ 2023ರಲ್ಲಿ 72,235 ಘಟಕಗಳ ಮಾರಾಟ ಕಂಡಿರುವ ರಾಯಲ್ ಎನ್‌ಫೀಲ್ಡ್ ಮೋಟರ್‌ಸೈಕಲ್‌ಗಳು ಕಳೆದ ವರ್ಷದ ಇದೇ ತಿಂಗಳಲ್ಲಿ 67,677 ಘಟಕಗಳ ಮಾರಾಟ ಕಂಡಿದ್ದವು.
2022-23ರ ವಿತ್ತೀಯ ವರ್ಷದಲ್ಲಿ 8,34,895 ಮೋಟರ್‌ಸೈಕಲ್‌ಗಳ ಮಾರಾಟದ ಮೂಲಕ ಒಂದೇ ವರ್ಷದಲ್ಲಿ ಅತ್ಯಂತ ಹೆಚ್ಚು ಮಾರಾಟ ಕಂಡ ದಾಖಲೆ ಸೃಷ್ಟಿಸಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಸಹ ಅಭೂತಪೂರ್ವ ಸಾಧನೆಗೈದಿರುವ ರಾಯಲ್ ಎನ್‌ಫೀಲ್ಡ್, ಇದೇ ಅವಧಿಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಘಟಕಗಳ ಮಾರಾಟ ಕಂಡಿದೆ. ದೇಶೀ ಮಾರುಕಟ್ಟೆಯಲ್ಲಿ ರಾಯಲ್ ಎನ್‌ಫೀಲ್ಡ್‌ನ 7,34,840 ಘಟಕಗಳ ಮಾರಾಟವಾಗಿವೆ.
ಹಂಟರ್ 350 ಹಾಗೂ ಸೂಪರ್ ಮೆಟೆಯಾರ್ 650 ಬೈಕ್‌ಗಳು ನಿರೀಕ್ಷೆ ಮೀರಿ ಮಾರಾಟ ಕಂಡಿದ್ದು, ಹೊಸ ಗ್ರಾಹಕರನ್ನು ತಂದಿವೆ ಎಂದು ರಾಯಲ್ ಎನ್‌ಫೀಲ್ಡ್ ಸಿಇಓ ಬಿ ಗೋವಿಂದರಾಜನ್ ತಿಳಿಸಿದ್ದಾರೆ.