ದೇಶದ ಅತಿ ದೊಡ್ಡ ಮೊಟರ್ಬೈಕ್ ಉತ್ಪಾದಕರಲ್ಲಿ ಒಂದಾದ ರಾಯಲ್ ಎನ್ಫೀಲ್ಡ್ ತನ್ನ ಕ್ಲಾಸಿಕ್-350 ಮಾಡೆಲ್ ಅನ್ನು ರಾಜಸ್ಥಾನದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ರಾಜಸ್ಥಾನದ 150 ಸಿಸಿ ಮೀರಿದ ಬೈಕ್ ಮಾರುಕಟ್ಟೆಯಲ್ಲಿ ಶೇ.45 ಪಾಲು ಹೊಂದಿರುವ ರಾಯಲ್ ಎನ್ಫೀಲ್ಡ್ಗೆ ಇದರಲ್ಲಿ ಶೇ.65 ನಷ್ಟು ಪಾಲನ್ನು ಕ್ಲಾಸಿಕ್ 350ಸಿಸಿಯೇ ಭರಿಸಿದೆ ಎಂದು ರಾಯಲ್ ಎನ್ಫೀಲ್ಡ್ 350ಸಿಸಿಯ ಬ್ರಾಂಡ್ ಮ್ಯಾನೇಜರ್ ಅನುಜ್ ದುವಾ ತಿಳಿಸಿದ್ದಾರೆ.
ʼಬೋಡುʼ ತಲೆಯವರಿಗೆ ಮಾತ್ರ ಈ ಉತ್ಸವಕ್ಕೆ ಪ್ರವೇಶ
ಬೈಕ್ನ ಎಕ್ಸ್ ಶೋರೂಂ ಬೆಲೆಯು 1,84,374 ರೂ.ಗಳಷ್ಟಿದ್ದು, ಸದ್ಯದ ಮಟ್ಟಿಗೆ ರಾಜಸ್ಥಾನದ ಎಲ್ಲಾ 48 ಡೀಲರ್ಶಿಪ್ಗಳ ಬಳಿ ಈ ಬೈಕ್ ಲಭ್ಯವಿದೆ.