ರಾಯಲ್ ಎನ್‌ಫೀಲ್ಡ್ ತನ್ನ ಶ್ರೇಣಿಯನ್ನು ವಿಸ್ತರಿಸಲು ಹಲವಾರು ಮೋಟಾರ್ ಸೈಕಲ್‌ಗಳನ್ನು ಬಿಡುಗಡೆ ಮಾಡುತ್ತಿದೆ. ಕಳೆದ ವರ್ಷ ಹಿಮಾಲಯನ್ 450 ಅನ್ನು ಬಿಡುಗಡೆ ಮಾಡಿತು. ಇದು ಸಾಕಷ್ಟು ಮೆಚ್ಚುಗೆಯನ್ನು ಪಡೆಯಿತು. ಇದು ಸಾಹಸ ಪ್ರವಾಸಿಗರಿಗೆ ಉತ್ತಮವಾಗಿದ್ದು, ಸಾಮಾನ್ಯವಾಗಿ ನಗರದಲ್ಲಿ ಸುತ್ತಾಡುವವರಿಗೆ ಹೆಚ್ಚು ಉಪಯುಕ್ತವಾದ ಬೈಕ್ ಬೇಕಾಗಿತ್ತು. ಅದಕ್ಕಾಗಿ ಅಂತನೇ ಹಂಟರ್ 450 ಬರುತ್ತಿದೆ.
ರಾಯಲ್ ಎನ್‌ಫೀಲ್ಡ್ ಈಗಾಗಲೇ ಹಂಟರ್ 450 ಅನ್ನು ಅಭಿವೃದ್ಧಿಪಡಿಸುತ್ತಿದೆ. ಈ ಹೊಸ ಬೈಕ್ ಹೇಗಿರಲಿದೆ ಎಂಬ ಕುತೂಹಲಕ್ಕೆ ಕೆಲ ಚಿತ್ರಗಳು ಉತ್ತರ ಕೊಟ್ಟಿವೆ. ನೂತನ ಮೋಟಾರ್‌ಸೈಕಲ್‌ನ ಕೆಲವು ಚಿತ್ರಗಳು ಹರಿದಾಡ್ತಿವೆ. ಹೊಸ ಮೋಟಾರ್‌ಸೈಕಲ್ ಭಾರತದಲ್ಲಿ ಕಾಣಿಸಿಕೊಂಡಿದ್ದು, ಯಾವಾಗ ಅಧಿಕೃತ ಬಿಡುಗಡೆ ಎಂಬ ಬಗ್ಗೆ ಇನ್ನೂ ದಿನಾಂಕ ಘೋಷಣೆಯಾಗಿಲ್ಲ.
ಆದರೆ 2024 ರ ಅಂತ್ಯದ ವೇಳೆಗೆ ಹಂಟರ್ 450 ಮಾರುಕಟ್ಟೆಗೆ ಬರಲಿದೆ ಎಂದು ನಿರೀಕ್ಷೆ ಇದೆ. ಇದರ ಬೆಲೆಗೆ ಸಂಬಂಧಿಸಿದಂತೆ ಹಂಟರ್ 450, ಹಿಮಾಲಯನ್ 450 ಗಿಂತ ಕೈಗೆಟುಕುವ ಬೆಲೆಯಲ್ಲಿರಲಿದೆ.
ಸದ್ಯ ಕಾಣಿಸಿಕೊಂಡಿರುವ ಚಿತ್ರದಲ್ಲಿ ಹಂಟರ್ 450 ಟ್ಯೂಬ್‌ಲೆಸ್ ಟೈರ್‌ಗಳನ್ನು ಹೊಂದಿರುವ ಮಿಶ್ರಲೋಹದ ಚಕ್ರಗಳನ್ನು ಹೊಂದಿದೆ. ಹಿಮಾಲಯನ್ 450 ಸಹ ಟ್ಯೂಬ್‌ಲೆಸ್ ಟೈರ್‌ಗಳನ್ನು ಹೊಂದಿದೆ. ಹಿಮಾಲಯನ್ 450 ನಲ್ಲಿರುವಂತೆ ಹಂಟರ್ 450 ನಲ್ಲೂ ಕೆಲವು ಭಾಗಗಳು ಸಾಮಾನ್ಯವಾಗಿವೆ.
ಅಪ್-ಸೈಡ್ ಡೌನ್ ಫೋರ್ಕ್ಸ್ ಮತ್ತು ಲಾಂಗ್-ಟ್ರಾವೆಲ್ ಸಸ್ಪೆನ್ಷನ್ ಅನ್ನು ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್‌ಗಳೊಂದಿಗೆ ಬದಲಾಯಿಸಲಾಗಿದೆ. ಆದಾಗ್ಯೂ ಹಿಂಭಾಗದ ಮೊನೊಶಾಕ್ ಅನ್ನು ಉಳಿಸಿಕೊಳ್ಳಲಾಗಿದೆ. ಹಂಟರ್ 450 ಹಿಮಾಲಯನ್ 450 ರಂತೆಯೇ 450 ಸಿಸಿ ಎಂಜಿನ್ ಅನ್ನು ಪಡೆಯುತ್ತದೆ.