ದೇಶದ ಅತ್ಯಂತ ಪ್ರತಿಷ್ಠಿತ ಬೈಕ್ ತಯಾರಿಕೆ ಸಂಸ್ಥೆಯಾದ ’ರಾಯಲ್ ಎನ್‌ಫೀಲ್ಡ್’, ನಗರದ ರಸ್ತೆಗಳ ಸಂಚಾರವನ್ನು ಗಮನದಲ್ಲಿ ಇರಿಸಿಕೊಂಡು ಹೊಸ ಬೈಕ್ ಬಿಡುಗಡೆಗೆ ಸಿದ್ಧತೆ ಮಾಡಿಕೊಂಡಿದೆ. 350 ಸಿಸಿ ಎಂಜಿನ್ ಸಾಮರ್ಥ್ಯದ ಹೊಸ ದೈತ್ಯ ಬೈಕ್ ’’ಹಂಟರ್’’ ರಸ್ತೆಗಿಳಿಯಲು ಸಜ್ಜಾಗಿದೆ. ಈಗಾಗಲೇ 350 ಸಿಸಿ ಸಾಮರ್ಥ್ಯದ ಮಿಟಿಯಾರ್ 350 ಬೈಕ್ ಅನ್ನು ರಾಯಲ್ ಎನ್‌ಫೀಲ್ಡ್ ಕಂಪನಿ ಮಾರುಕಟ್ಟೆಗೆ ಬಿಟ್ಟಿದೆ. ಆದರೂ, ’ಜೆ’ ಪ್ಲಾಟ್‌ಫಾರ್ಮ್ ಹೆಸರಲ್ಲಿ ಹೆಚ್ಚು ಸದೃಢ, ಅಧಿಕ ಬಳಕೆ ಬರುವಂತಹ, ಚಲಿಸುವ ವೇಳೆ ಸ್ಥಿರತೆಯುಳ್ಳ 350 ಸಿಸಿ ಸಾಮರ್ಥ್ಯದ ಹಂಟರ್ ಬೈಕ್ ಪರಿಚಯಿಸುತ್ತಿದೆ.
ಪರೀಕ್ಷಾರ್ಥವಾಗಿ ರಸ್ತೆಗೆ ಇಳಿಸಲಾದ ಹಂಟರ್ ಬೈಕ್‌ನ ಫೋಟೊಗಳನ್ನು ಮಾಧ್ಯಮದವರು ಸೆರೆಹಿಡಿದಿದ್ದಾರೆ. ಐದು ಸ್ಪೀಡ್ ವಿಭಾಗದ ಗೇರ್‌ಬಾಕ್ಸ್, 20.2 ಬಿಎಚ್‌ಪಿ ವೇಗ ಸಾಮರ್ಥ್ಯ, ಮುಂದಿನ ಟೈರ್‌ಗೆ ಟೆಲಿಸ್ಕೊಪಿಕ್ ಶಾಕ್ ಅಬಸರ್ವರ್, ಹಿಂದಿನ ಟೈರ್‌ಗೆ ಟ್ವಿನ್ ಶಾಕ್ ಅಬಸರ್ವರ್ ಇರುವುದು ಹಂಟರ್ ಬೈಕ್ ವೈಶಿಷ್ಟ್ಯತೆ.
ಮೆಕ್ಕೆಜೋಳ ಬೆಳೆಗಾರರಿಗೆ ಗುಡ್ ನ್ಯೂಸ್: 2 ವರ್ಷದ ನಂತರ ದರ 300 ರೂ. ಹೆಚ್ಚಳ
ಪ್ರಮುಖವಾಗಿ ಹೊಂಡಾ ಸಿಬಿಆರ್ 350 ಆರ್‌ಎಸ್‌ಗೆ ಸ್ಪರ್ಧೆ ನೀಡಲು ಹಂಟರ್ ಬೈಕ್ ಮಾರುಕಟ್ಟೆಗೆ ಬರುತ್ತಿದೆ. ಇದರ ಆರಂಭಿಕ ಬೆಲೆಯು 1.70 ರಿಂದ 1.90 ಲಕ್ಷ ರೂ. ಆಗಿದೆ.
ಇದಲ್ಲದೇ, ರಾಯಲ್ ಎನ್‌ಫೀಲ್ಡ್ ಕಂಪನಿಯ ನ್ಯೂ ಕ್ಲಾಸಿಕ್ 350, ಹಿಮಾಲಯನ್, ಇಂಟರ್‌ಸೆಪ್ಟರ್ 650 ಮಾಡೆಲ್‌ನ ಬೈಕ್‌ಗಳು ಬೈಕ್ ಸವಾರರ ಮನಗೆದ್ದು ರಸ್ತೆಗಳಲ್ಲಿ ಬೀಗುತ್ತಿವೆ.