ರಾಯಲ್ ಎನ್‌ಫೀಲ್ಡ್ 650 ಅವಳಿಗಳ ಲಾಂಚ್‌ಗೂ ಮುನ್ನ ಮುಂಬರಲಿರುವ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 450 ಬಗ್ಗೆ ಸಾಕಷ್ಟು ಅಂತೆ ಕಂತೆಗಳು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಮಾಡುತ್ತಿವೆ.
ಅಪ್ಸೈಡ್ ಡೌನ್ ಫೋರ್ಕ್ ಸೆಟಪ್, ಲಿಕ್ವಿಡ್ ಕೂಲ್ಡ್ ಸಿಂಗಲ್ ಸಿಲಿಂಡರ್ ಇಂಜಿನ್ ಸೇರಿದಂತೆ ರಾಯಲ್ ಎನ್‌ಫೀಲ್ಡ್‌ನ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಅನೇಕ ವೈಶಿಷ್ಟ್ಯತೆಗಳನ್ನು ಹಿಮಾಲಯನ್ 450 ಒಳಗೊಂಡಿದೆ. ಈ ಹೊಸ ಬೈಕ್‌ನ ಸ್ಪೈ ಶಾಟ್‌ಗಳು ಬೈಕ್‌ಪ್ರಿಯರ ಮನಸೆಳೆಯುತ್ತಿವೆ.
ಯುಎಸ್‌ಡಿ ಫೋರ್ಕ್ ಸೆಟಪ್, ಮುಂಬದಿಯಲ್ಲಿ ಆಕ್ಸಿಯಲ್ ಕ್ಯಾಲಿಪರ್‌ನೊಂದಿಗೆ ಸಿಂಗಲ್ ಡಿಸ್ಕ್ ಬ್ರೇಕ್‌ಗಳು ಈ ಬೈಕ್‌ನಲ್ಲಿ ಇದ್ದಂತೆ ಕಾಣುತ್ತಿವೆ.
ಇದರೊಂದಿಗೆ ಅವಳಿ ಸೀಟ್ ಸೆಟಪ್‌ನೊಂದಿಗೆ ಸವಾರರಿಗೆ ಇನ್ನಷ್ಟು ಆರಾಮದಾಯಕ ಅನುಭವ ಹಾಗೂ ಆಫ್‌ರೋಡಿಂಗ್‌ಗೆ ಅನುವಾಗುವ ಅನೇಕ ಫೀಚರ್‌ಗಳನ್ನು ಈ ಬೈಕ್ ಒಳಗೊಂಡಿದೆ. 21-ಇಂಚಿನ ಮುಂಬದಿ ಚಕ್ರ ಹಾಗೂ 17 ಇಂಚಿನ ಹಿಂಬದಿ ಚಕ್ರಗಳು ಸ್ಪೋಕ್ ಕಡ್ಡಿಗಳೊಂದಿಗೆ ಬಂದಿವೆ.
ಸ್ಪಷ್ಟವಾದ ಫ್ಲೈಸ್ಕ್ರೀನ್, ಸೆಮಿ-ಡಿಜಿಟಪ್ ಇನ್ಸ್‌ಟ್ರುಮೆಂಟ್ ಕ್ಲಸ್ಟರ್, ಎಲ್‌ಇಡಿ ಹೆಡ್‌ಲೈಟ್, ಹ್ಯಾಲೋಜೆನ್ ಇಂಡಿಕೇಟರ್‌ಗಳು, ಡ್ಯುಯಲ್ ಚಾನೆಲ್ ಎಬಿಎಸ್‌ಗಳನ್ನು ಸಹ ಹಿಮಾಲಯನ್ 450 ಒಳಗೊಂಡಿದೆ.
ಈ ಬೈಕಿನ ಬಿಡುಗಡೆ ಮುಂದಿನ ವರ್ಷದ ಆರಂಭದಲ್ಲಿ ಆಗುವ ಸಾಧ್ಯತೆ ಇದೆ. ಕೆಟಿಎಂ ಅಡ್ವೆಂಚರ್ 390, ಯೆಜ್ಡಿ ಅಡ್ವೆಂಚರ್‌ನಂಥ ಬೈಕ್‌ಗಳಿಗೆ ಪೈಪೋಟಿಯಾಗಿ ಹಿಮಾಲಯನ್ 450 ಬರಲಿದ್ದು, ಇದರ ಬೆಲೆ (ಎಕ್ಸ್‌ಶೋರೂಂ) ಮೂರು ಲಕ್ಷದ ಹಿಂದೆ ಮುಂದೆ ಇರುವ ನಿರೀಕ್ಷೆ ಇದೆ.