alex Certify ರಾಯಲ್ ಎನ್‌ಫೀಲ್ಡ್‌ 650 ಟ್ವಿನ್ಸ್‌ ವಾರ್ಷಿಕ ಎಡಿಷನ್: 2 ನಿಮಿಷದೊಳಗೆ ಎಲ್ಲಾ ಬೈಕ್‌ ಸೋಲ್ಡ್ ಔಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಯಲ್ ಎನ್‌ಫೀಲ್ಡ್‌ 650 ಟ್ವಿನ್ಸ್‌ ವಾರ್ಷಿಕ ಎಡಿಷನ್: 2 ನಿಮಿಷದೊಳಗೆ ಎಲ್ಲಾ ಬೈಕ್‌ ಸೋಲ್ಡ್ ಔಟ್

120ನೇ ವರ್ಷಾಚರಣೆಯ ಸಂಭ್ರಮದಲ್ಲಿರುವ ರಾಯಲ್ ಎನ್‌ಫೀಲ್ಡ್‌, ಇದೇ ಸಿರಿಯಲ್ಲಿ ಬಿಡುಗಡೆ ಮಾಡಿದ ವಿಶೇಷ ಎಡಿಷನ್‌ನ 650 ಟ್ವಿನ್ಸ್‌ನ 120 ಘಟಕಗಳು ಬರೀ ಎರಡು ನಿಮಿಷಗಳಲ್ಲಿ ಸೋಲ್ಡ್‌ ಔಟ್ ಎಂದು ಘೋಷಿಸಿದೆ. ಇವುಗಳಲ್ಲಿ ಇಂಟರ್ಸೆಪ್ಟರ್‌ ಹಾಗೂ ಕಾಂಟಿನೆಂಟಲ್‌ನ ತಲಾ 60 ಘಟಕಗಳು ಇವೆ.

60 ಇಂಟರ್ಸೆಪ್ಟರ್‌‌ ಐಎನ್‌ಟಿ 650 ಹಾಗೂ 60 ಕಾಂಟಿನೆಂಟಲ್ ಜಿಟಿ650 ಬೈಕುಗಳಿಗೆ ಮೋಟರ್‌ ಸೈಕಲ್ ಪ್ರಿಯರಿಂದ ಭಾರೀ ಪ್ರತಿಕ್ರಿಯೆಗಳು ಬಂದಿವೆ. ಈ ವಿಶೇಷ ಅವತರಣಿಕೆಯ ಬೈಕ್‌ಗಳನ್ನು ಇಐಸಿಎಂಎ 2021ರ ವೇಳೆ ಅನಾವರಣಗೊಳಿಸಲಾಗಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ವಾರ್ಷಿಕ ಎಡಿಷನ್‌ನ 650 ಟ್ವಿನ್ಸ್‌ ಮೋಟರ್‌ಸೈಕಲ್‌ಗಳ 480 ಘಟಕಗಳನ್ನು ಮಾರಾಟಕ್ಕೆ ಸಜ್ಜುಗೊಳಿಸಲಾಗಿದೆ.

ಅಧಿಕ ಕೊಲೆಸ್ಟ್ರಾಲ್ ಸಮಸ್ಯೆ ಇರುವವರು ಈ ಆಹಾರವನ್ನು ಸೇವಿಸಿದರೆ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತದೆ

ಡಿಸೆಂಬರ್‌ 6ರಂದು ಮಾರಾಟಕ್ಕೆ ಬಂದ ಈ ಬೈಕ್‌ ಗಳು ದಾಖಲೆ ಅವಧಿಯಲ್ಲಿ ಸೋಲ್ಡ್‌ ಔಟ್ ಆಗಿರುವುದಾಗಿ ಕಂಪನಿ ತಿಳಿಸಿದೆ. ಮೊದಲು ಬಂದವರಿಗೆ ಆದ್ಯತೆಯ ಮೇಲೆ ಈ ಬೈಕ್‌ಗಳನ್ನು ಮಾರಲಾಗಿದೆಯಂತೆ.

ಈ ಬೈಕ್‌ಗಳ ಪ್ಯಾಕೇಜ್‌ನಲ್ಲಿ ವಿಶೇಷ ಅಕ್ಸೆಸರಿಗಳು, ಮೂರು ವರ್ಷದ ಸ್ಟಾಂಡರ್ಡ್ ವಾರಂಟಿಯೊಂದಿಗೆ 4-5ನೇ ವರ್ಷಕ್ಕೆ ವಿಸ್ತರಿತ ವಾರಂಟಿಯನ್ನು ನೀಡಲಾಗಿದೆ. ಈ ಬೈಕ್‌ಗಳು ಆಗ್ನೇಯ ಏಷ್ಯಾ, ಅಮೆರಿಕಗಳು ಹಾಗೂ ಯೂರೋಪಿಯನ್ ಮಾರುಕಟ್ಟೆಗಳಲ್ಲೂ ಶೀಘ್ರದಲ್ಲೇ ಮಾರಾಟಕ್ಕೆ ಲಭ್ಯವಿರಲಿವೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...