ರಾಯಲ್ ಎನ್‌ಫೀಲ್ಡ್‌ಯು ಡುಕಾಟಿ ಡಯಾವೆಲ್‌ನಿಂದ ಪ್ರೇರಿತವಾದ ಹೊಸ ಪವರ್ ಕ್ರೂಸರ್ ಅನ್ನು ಬಿಡುಗಡೆ ಮಾಡಲು ಯೋಜಿಸುತ್ತಿದೆ. ಭಾರತೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗಳನ್ನು ಗುರಿಯಾಗಿರಿಸಿಕೊಂಡು ಟೈಮ್‌ಲೈನ್ ಸಿದ್ಧಗೊಳ್ಳುತ್ತಿದ್ದು, ಹೊಸ ವಾಹನದ ವಿನ್ಯಾಸ ಇನ್ನೂ ಸಂಪೂರ್ಣವಾಗಿ ಬಿಡುಗಡೆ ಮಾಡಲಾಗಿಲ್ಲ.
ಆದರೆ ಆರಂಭಿಕ ರೆಂಡರಿಂಗ್ ಅಂತಿಮ ಉತ್ಪನ್ನವು ಹೇಗಿರಬಹುದು ಎಂಬುದರ ಒಂದು ನೋಟವನ್ನು ಒದಗಿಸುತ್ತದೆ. ವರದಿಗಳ ಪ್ರಕಾರ, ಹೊಸ ಮೋಟಾರ್‌ಸೈಕಲ್ ಬೆನೆಲ್ಲಿ 502C ಅನ್ನು ಹೋಲುವಂತಿದೆ.
ಸ್ವೆಪ್ಟ್ ಬ್ಯಾಕ್ ಹ್ಯಾಂಡಲ್ ಬಾರ್‌ಗಳು, ಅರಾಮದಾಯಕ ಸವಾರಿಗಾಗಿ ಸೀಟ್ ವಿನ್ಯಾಸದಂತಹ ಗುಣಲಕ್ಷಣಗಳೊಂದಿಗೆ ಪವರ್ ಕ್ರೂಸರ್ ಸಿದ್ಧಗೊಳ್ಳುತ್ತಿದೆ. ರಾಯಲ್ ಎನ್‌ಫೀಲ್ಡ್ ಮೋಟಾರ್ ಸೈಕಲ್ ಅನ್ನು ಅಡ್ವೆಂಚರ್ ಅಥವಾ ಸ್ಟ್ರೀಟ್‌ಫೈಟರ್ ಬೈಕ್‌ಗಳಂತಹ ಹೆಚ್ಚು ವೆಚ್ಚ, ಪರಿಣಾಮಕಾರಿ ಟೆಲಿಸ್ಕೋಪಿಕ್ ಫೋರ್ಕ್‌ಗಳೊಂದಿಗೆ ಸಜ್ಜುಗೊಳಿಸುತ್ತದೆಯೇ ಎಂಬುದರ ಬಗ್ಗೆ ಸ್ಪಷ್ಟವಾಗಿಲ್ಲ.
ಪವರ್ ಕ್ರೂಸರ್ ದೊಡ್ಡ ಇಂಧನ ಟ್ಯಾಂಕ್, ಅಪ್‌ಸ್ವೆಪ್ಟ್ ಎಕ್ಸಾಸ್ಟ್, ಸ್ವೆಪ್ಟ್- ಬ್ಯಾಕ್ ಹ್ಯಾಂಡಲ್‌ಬಾರ್ ಮತ್ತು ಹಿಂಭಾಗದ ಟೈರ್ ಹಗ್ಗರ್ ಅನ್ನು ಹೊಂದಿರಲಿದೆ. ಬೈಕ್‌ನ ಲೈಟ್ ಸಂಪೂರ್ಣವಾಗಿ ಎಲ್‌ಇಡಿ ಆಗಿರುತ್ತದೆ ಮತ್ತು ಇದು ಬ್ಲೂಟೂತ್ ಸಂಪರ್ಕದೊಂದಿಗೆ ಕಂಪ್ಯೂಟರೈಸ್ಡ್ ಉಪಕರಣ ಕ್ಲಸ್ಟರ್ ಅನ್ನು ಹೊಂದಿರಲಿದೆ.
ರಾಯಲ್ ಎನ್‌ಫೀಲ್ಡ್ ಕ್ರೂಸರ್ ಸುರಕ್ಷತೆಗಾಗಿ ಮುಂಭಾಗ ಮತ್ತು ಹಿಂಭಾಗದ ಎರಡೂ ಚಕ್ರಗಳಲ್ಲಿ ಡಿಸ್ಕ್ ಬ್ರೇಕ್ ಒಳಗೊಂಡಿರುತ್ತದೆ. ಸುಧಾರಿತ ನಿರ್ವಹಣೆಗಾಗಿ ಇದು ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಸಹ ಪಡೆಯಬಹುದು. 450 ಸಿಸಿ ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಎಂಜಿನ್ ಹೊಸ ಮೋಟಾರ್ ಸೈಕಲ್‌ಗೆ ಶಕ್ತಿ ತುಂಬಲಿದೆ.
6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ನೀಡಿದಾಗ ಸುಮಾರು 40 ಬಿಎಸ್‌ಪಿ ಪವರ್ ಮತ್ತು 45ಎನ್ ಎಂ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸಲಿದೆ. ರಾಯಲ್ ಎನ್‌ಫೀಲ್ಡ್ ಮಾದರಿಗಳಾದ ಹಿಮಾಲಯನ್ 450, ರೋಡ್‌ಸ್ಟರ್ 450 ಮತ್ತು ಸ್ಕ್ರ್ಯಾಂಬ್ಲರ್ 450 ನ ಎಂಜಿನ್ ಮಾದರಿಯಲ್ಲಿರಲಿದೆ.
ಪವರ್ ಕ್ರೂಸರ್‌ನ ಬೆಲೆಯು 2.70 ಲಕ್ಷ ಮತ್ತು ರೂ. 2.80 ಲಕ್ಷ (ಎಕ್ಸ್ ಶೋ ರೂಂ) ಇರಬಹುದೆಂದು ಅಂದಾಜಿಸಲಾಗಿದೆ. ಬೈಕ್ ತಯಾರಕರ ಪ್ರಕಾರ ಇತ್ತೀಚಿನ ಜನರೇಶನ್ ಬುಲೆಟ್ ಆಗಸ್ಟ್ 30 ರಂದು ಲಭ್ಯವಿರುತ್ತದೆ.