ಬೆಂಗಳೂರು: ಬೆಂಗಳೂರಿನಲ್ಲಿ ನಡೆದಿದ್ದ ರೌಡಿಶೀಟರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಕೋಕಾ ಕಾಯ್ದೆ ಜಾರಿಯಾಗಿದೆ.
ಡಿ.ಜೆ.ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ರೌಡಿಶೀಟರ್ ಕಪಿಲ್ ಹತ್ಯೆ ಪ್ರಕರಣದ ಆರೋಪಿಗಳ ವಿರುದ್ಧ ನ್ಯಾಯಾಲಯ ಕೋಕಾ( ಕರ್ನಾಟಕ ಅಪರಾಧ ನಿಯಂತ್ರಣ ಕಾಯ್ದೆ) ಕಾಯ್ದೆ ಜಾರಿ ಮಾಡಿದೆ.
ಜುಲೈ 11ರಂದು ರೌಡಿಶೀಟರ್ ಕಪಿಲ್ ಹತ್ಯೆ ನಡೆದಿತ್ತು. ಪ್ರಕರಣದಲ್ಲಿ ಐವರು ಆರೋಪಿಗಳನ್ನು ಬಂಧಿಸಲಾಗಿತ್ತು. ಮತ್ತೋರ್ವ ಆರೋಪಿ ರೌಡಿಶೀಟರ್ ಪಲ್ಲರವಿ ಜೈಲಿನಲ್ಲಿಂದಲೇ ಕೊಲೆಗೆ ಸಂಚು ರೂಪಿಸಿದ್ದ. ಆರೋಪಿಗಳು ಸಂಘಟಿತರಾಗಿ ಕೊಲೆ ಮಾಡಿರುವುದು ತನಿಖೆಯಿಂದ ಬಯಲಾಗಿತ್ತು.
ಈ ಹಿನ್ನೆಲೆಯಲ್ಲಿ ಕಪಿಲ್ ಕೊಲೆ ಆರೋಪಿಗಳನ್ನು ಕೋಕಾ ಕಾಯ್ದೆಗೆ ಸೇರ್ಪಡೆ ಮಾಡಲಾಗಿದೆ. ಕೋಕಾ ಕಾಯ್ದೆ ಜಾರಿಯಾದರೆ ಆರೋಪಿಗಳಿಗೆ 2 ವರ್ಷ ಜಾಮೀನು ಸಿಗುವುದಿಲ್ಲ. ಅಲ್ಲದೇ ಹೈಕೋರ್ಟ್ ನಲ್ಲಿ ಮಾತ್ರ ಜಾಮೀನು ಪಡೆದುಕೊಳ್ಳಲು ಅವಕಾಶವಿರುತ್ತದೆ ಹೊರತು ಕೆಳ ಹಂತದ ನ್ಯಾಯಾಲಯದಲ್ಲಿ ಅವಕಾಶವಿರುವುದಿಲ್ಲ.