ಬೆಳಗಾವಿ: ಅಪರಿಚಿತರ ಗುಂಪು ರೌಡಿಶೀಟರ್ ಮೇಲೆ ಫೈರಿಂಗ್ ನಡೆಸಿ, ಹತ್ಯೆಗೆ ಯತ್ನಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ಬೆಳಗುಂದಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ರೌಡಿಶೀಟರ್ ಪ್ರಫುಲ್ ಪಟೇಲ್ ಮೇಲೆ ಫೈರಿಂಗ್ ನಡೆಸಲಾಗಿದೆ. ಪ್ರಫುಲ್ ಪಟೇಲ್ ತನ್ನ ಕಾರಿನಲ್ಲಿ ಬೆಳಗುಂದಿಯಿಂದ ಮನೆಗೆ ತೆರಳುತ್ತಿದ್ದ ವೇಳೆ ಅಪರಿಚಿತರ ಗುಂಪು ಏಕಾಏಕಿ ಗುಂಡಿನ ದಾಳಿ ನಡೆಸಿದೆ.
ಗುಂಡೇಟು ಕಾರಿನ ಗಾಜಿಗೆ ತಗುಲಿದೆ. ಕಾರಿನ ಗಾಜು ಒಡೆದು, ಪ್ರಫುಲ್ ಪಟೇಲ್ ಮುಖ, ತಲೆಯ ಭಾಗಕ್ಕೆ ಗಂಭೀರ ಗಾಯಗಳಾಗಿವೆ. ರೌಡಿಶೀತರ್ ಪ್ರಫುಲ್ ಪಟೇಲ್ ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.