
ಬೆಂಗಳೂರು: ಗೂಂಡಾ ಕಾಯ್ದೆಯಡಿ ಇಬ್ಬರು ಕುಖ್ಯಾತ ರೌಡಿಶೀಟರ್ ಗಳನ್ನು ಬಂಧಿಸಲಾಗಿದೆ. ಕುಖ್ಯಾತ ರೌಡಿ ಸಹೋದರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಸಾಗರ್ ಅಲಿಯಾಸ್ ವೀರು ಮತ್ತು ಸಂಜಯ್ ಅವರನ್ನು ಗೂಂಡಾ ಕಾಯ್ದೆಯಡಿ ಬಂಧಿಸಲಾಗಿದೆ. ಕುಳ್ಳ ರಿಜ್ವಾನ್ ಸಹಚರರಾದ ವೀರು ಮತ್ತು ಸಂಜು ಸಹೋದರರು ಹನುಮಂತನಗರ, ಆರ್‌ಎಂಸಿ ಯಾರ್ಡ್ ಠಾಣೆಗಳ ರೌಡಿಶೀಟರ್ ಗಳಾಗಿದ್ದಾರೆ. ಇವರು ಕೊಲೆ ಯತ್ನ, ದರೋಡೆ, ಸುಲಿಗೆ, ಅಪಹರಣ ಕೇಸ್ ಗಳಲ್ಲಿ ಸಕ್ರಿಯರಾಗಿದ್ದರು. ಇವರನ್ನು ಗೂಂಡಾ ಕಾಯ್ದೆಯಡಿ ಬಂಧಿಸಿ ಜೈಲಿಗಟ್ಟಲಾಗಿದೆ.