ಬೆಂಗಳೂರು : ಬಿಗ್ ಬಾಸ್ ರನ್ನರ್ ಅಪ್ ಡ್ರೋನ್ ಪ್ರತಾಪ್’ ವಿರುದ್ಧ ಸಾಲು ಸಾಲು ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.
ದಾಖಲಾದ ಎರಡು ದೂರುಗಳ ತನಿಖೆಯನ್ನು ಆರ್ ಆರ್ ನಗರ ಪೊಲೀಸರು ಕೈಗೊಂಡಿದ್ದಾರೆ. ಡ್ರೋನ್ ಪ್ರತಾಪ್ ಅವರ ಬ್ಯುಸಿನೆಸ್ ಪಾರ್ಟನರ್ ಸಾರಂಗ್ ನೀಡಿರುವ ದೂರು ಹಾಗೂ ಬಿಬಿಎಂಪಿ ಅಧಿಕಾರಿ ಪ್ರಯಾಗ್ ಮಾನನಷ್ಟ ಮೊಕದ್ದಮೆ ಹೂಡಿರುವ ಬಗ್ಗೆ ತನಿಖೆ ಕೈಗೆತ್ತಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಡ್ರೋನ್ ಪ್ರತಾಪ್ ವಿರುದ್ಧ ಸಾಲು ಸಾಲು ದೂರುಗಳು ದಾಖಲಾಗಿದ್ದು, ದಾಖಲಾದ ಎರಡು ದೂರುಗಳ ತನಿಖೆಯನ್ನು ಆರ್ ಆರ್ ನಗರ ಪೊಲೀಸರು ಕೈಗೆತ್ತಿಕೊಂಡಿದ್ದಾರೆ.
ಸುಮಾರು 35 ಲಕ್ಷ 75 ಸಾವಿರ ಹಣ ಪಡೆದು ಕ್ವಾಲಿಟಿ ಇಲ್ಲದ ಹಾಗೂ ಸರಿಯಾಗಿ ಕೆಲಸ ಮಾಡದ ಡ್ರೋನ್ ಗಳನ್ನು ನೀಡಿ ಮೋಸ ಮಾಡಿದ್ದಾರೆ ಎಂದು ಪ್ರತಾಪ್ ಬ್ಯುಸಿನೆಡ್ ಪಾರ್ಟ್ನರ್ ಸಾರಂಗ ಮಾನ್ ಎಂಬುವವರು ದೂರು ದಾಖಲಿಸಿದ್ದರು.
ಹಾಗೂ ಕೋವಿಡ್ ಸಂದರ್ಭದಲ್ಲಿ ಬಿಬಿಎಂಪಿ ಅಧಿಕಾರಿಗಳು ತನ್ನನ್ನು ಕೆಟ್ಟದಾಗಿ ನಡೆಸಿಕೊಂಡಿದ್ದಾರೆ ಎಂದು ಡ್ರೋನ್ ಪ್ರತಾಪ್ ಹೇಳಿದ್ದರು. ಕ್ವಾರಂಟೈನ್ ಸಮಯದಲ್ಲಿ ಅಧಿಕಾರಿಯೊಬ್ಬರು ನನ್ನನ್ನು ಕೆಟ್ಟದಾಗಿ ನಡೆಸಿಕೊಂಡಿದ್ದರು. ತಲೆಗೆ ಹೊಡೆದು ತೊಂದರೆ ಕೊಟ್ಟಿದ್ದರು. ಹುಚ್ಚ ಎಂದು ಹೇಳಿದ್ದರು. ಅಲ್ಲದೇ ಹುಚ್ಚ ಅಂತ ಪೇಪರ್ ಗೆ ಸಹಿ ಹಾಕು ಎಂದು ಒತ್ತಾಯಿಸಿದ್ದರು ಎಂದು ಪ್ರತಾಪ್ ಬಿಬಿಎಂಪಿ ಅಧಿಕಾರಿ ಪ್ರಯಾಗ್ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಇದಲ್ಲದೇ ಡ್ರೋನ್ ಪ್ರತಾಪ್ ವಿರುದ್ಧ ಹಲವು ವಂಚನೆ ಆರೋಪಗಳು ಕೇಳಿಬಂದಿದೆ.