ನವದೆಹಲಿ: ಪಂಜಾಬ್ ಎಎಪಿ ನಾಯಕ, ಸಚಿವ ಬಾಲ್ಕರ್ ಸಿಂಗ್, ಉದ್ಯೋಗಾಕಾಂಕ್ಷಿ ಮಹಿಳೆಗೆ ವಿಡಿಯೋ ಕರೆಯಲ್ಲಿ ಬಟ್ಟೆ ಬಿಚ್ಚುವಂತೆ ಒತ್ತಾಯಿಸಿದ ನಂತರ ಹಸ್ತಮೈಥುನ ಮಾಡಿದ ಆರೋಪ ಕೇಳಿ ಬಂದಿದೆ.
ಪಂಜಾಬ್ ಸಚಿವ ಬಾಲ್ಕರ್ ಸಿಂಗ್ ಅವರು ಲೈಂಗಿಕ ದೌರ್ಜನ್ಯದ ಆರೋಪಕ್ಕೆ ಗುರಿಯಾಗಿದ್ದಾರೆ. ಭಾರತೀಯ ಜನತಾ ಯುವ ಮೋರ್ಚಾದ(ಬಿಜೆವೈಎಂ) ರಾಷ್ಟ್ರೀಯ ಕಾರ್ಯದರ್ಶಿ ತಜೀಂದರ್ ಬಗ್ಗಾ ಅವರು ಆಘಾತಕಾರಿ ಘಟನೆಯನ್ನು ಬಹಿರಂಗಪಡಿಸಿದ್ದು, ಸಚಿವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಬಗ್ಗಾ ಅವರ ಎಕ್ಸ್ ಪೋಸ್ಟ್ ಪ್ರಕಾರ, 21 ವರ್ಷದ ಮಹಿಳೆಯೊಬ್ಬರು ಆಮ್ ಆದ್ಮಿ ಪಕ್ಷದ(ಎಎಪಿ) ನಾಯಕ ಬಾಲ್ಕರ್ ಸಿಂಗ್ ಅವರನ್ನು ಉದ್ಯೋಗಕ್ಕಾಗಿ ಸಂಪರ್ಕಿಸಿದ್ದಾರೆ. ಸಹಾಯವನ್ನು ನೀಡುವ ಬದಲು ಬಾಲ್ಕರ್ ಸಿಂಗ್ ಅವರು ವೀಡಿಯೊ ಕರೆಗಳನ್ನು ಮಾಡುವಂತೆ ಒತ್ತಾಯಿಸಿದರು, ಆ ಸಮಯದಲ್ಲಿ ಅವರು ವಿವಸ್ತ್ರಗೊಳ್ಳುವಂತೆ ಮಹಿಳೆಗೆ ಒತ್ತಾಯಿಸಿದ್ದಾರೆ ಮತ್ತು ಹಸ್ತಮೈಥುನ ಮಾಡಿದ್ದಾರೆ. ಇದು ವೈರಲ್ ಆಗಿದ್ದು, ವ್ಯಾಪಕ ಆಕ್ರೋಶ ಮತ್ತು ಖಂಡನೆ ವ್ಯಕ್ತವಾಗಿದೆ.
21 ವರ್ಷದ ಸಹೋದರಿ ಆಮ್ ಆದ್ಮಿ ಪಕ್ಷದ ಪಂಜಾಬ್ ಸಚಿವ ಬಾಲ್ಕರ್ ಸಿಂಗ್ ಬಳಿ ಬಂದು ತನಗೆ ಕೆಲಸದ ಅವಶ್ಯಕತೆ ಇದೆ ಎಂದು ಹೇಳುತ್ತಾಳೆ. ಬಾಲ್ಕರ್ ಅವಳನ್ನು ವೀಡಿಯೊ ಕರೆಗಳನ್ನು ಮಾಡಲು ಕೇಳುತ್ತಾನೆ, ಅವಳ ಬಟ್ಟೆಗಳನ್ನು ತೆಗೆಯುವಂತೆ ಒತ್ತಾಯಿಸುತ್ತಾನೆ ಮತ್ತು ಹಸ್ತಮೈಥುನ ಮಾಡುತ್ತಾನೆ. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತು ಪಂಜಾಬ್ ಸಿಎಂ ಭಗವಂತ್ ಮಾನ್ ತಕ್ಷಣವೇ ಬಾಲ್ಕರ್ ಅವರನ್ನು ವಜಾಗೊಳಿಸಬೇಕೆಂದು ನಾನು ಒತ್ತಾಯಿಸುತ್ತೇನೆ ಎಂದು ಬಗ್ಗಾ ಎಕ್ಸ್ ಪೋಸ್ಟ್ ನಲ್ಲಿ ವೀಡಿಯೊ ಮನವಿಯೊಂದಿಗೆ ಬರೆದಿದ್ದಾರೆ.
ಈ ವಿಡಿಯೋ ವ್ಯಾಪಕವಾಗಿ ಹರಿದಾಡುತ್ತಿದ್ದು, ಸಮಗ್ರ ತನಿಖೆಗೆ ಸಾರ್ವಜನಿಕರು ಆಗ್ರಹಿಸಿದ್ದಾರೆ.