ನಾಯಿಗಳು ಮನುಷ್ಯರಿಗಿಂತಲೂ ಮೊದಲಿಗೆ ವಿಪತ್ತನ್ನು ಗುರುತಿಸುತ್ತವೆ. ಅಂಥದ್ದೇ ಒಂದು ಘಟನೆ ದಕ್ಷಿಣ ಆಫ್ರಿಕಾದಲ್ಲಿ ನಡೆದಿದೆ. ಮಾಲೀಕರ ಮಂಚದ ಕೆಳಗೆ ನೋಡಿಕೊಂಡು ನಾಯಿ ಕೂಗುತ್ತಿದ್ದರೂ ಮಾಲೀಕರು ಅದನ್ನು ಅಷ್ಟಾಗಿ ಗಮನಿಸರಲಿಲ್ಲ. ಕೊನೆಗೆ ನೋಡಿದಾಗ ಮಂಚದ ಕೆಳಗೆ ಬೃಹದಾಕಾರದ ಹಾವನ್ನು ಕಂಡು ಬೆಚ್ಚಿ ಬಿದ್ದಿದ್ದಾರೆ.
ಅದೃಷ್ಟವಶಾತ್ ಹಾವು ಯಾರ ಪ್ರಾಣಕ್ಕೂ ಹಾನಿ ಮಾಡದೇ ಮಂಚದ ಕೆಳಗೇ ಕುಳಿತಿತ್ತು. ಕೂಡಲೇ ಮಾಲೀಕರು ನಾಯಿಯನ್ನು ಬಿಟ್ಟಾಗ ಅದು ಹಾವನ್ನು ಕೊಲ್ಲಲು ಹೋಯಿತು. ಆದರೆ ಮಾಲೀಕರು ಹಾಗೆ ಮಾಡಲು ಬಿಡದೇ ಹಾವು ರಕ್ಷಕರಿಗೆ ಕರೆ ಮಾಡಿದ್ದಾರೆ.
ಹಾವು ರಕ್ಷಕರು ಹಾವನ್ನು ಹಿಡಿದುಕೊಂಡು ಹೋಗಿದ್ದಾರೆ. ಜೊತೆಗೆ, ನಾಯಿಗಳು ವಿಚಿತ್ರವಾಗಿ ಕೂಗುತ್ತಿದ್ದರೆ ದಯವಿಟ್ಟು ಆ ಬಗ್ಗೆ ಗಮನ ಹರಿಸಿ ಎಂದಿರುವ ತಜ್ಞರು, ಹಾವುಗಳು ಕಾಣಿಸಿಕೊಂಡಾಗ ಸಾಕು ಪ್ರಾಣಿಗಳನ್ನು ಬಿಡಬೇಡಿ. ಅನೇಕ ಸಂದರ್ಭಗಳಲ್ಲಿ ಹಾವುಗಳಿಂದ ಅವು ಸಾಯುವ ಸಾಧ್ಯತೆ ಇರುತ್ತವೆ ಎಂದಿದ್ದಾರೆ.