ರೊಟ್ಟಿ, ಚಪಾತಿ ಎಲ್ಲರೂ ಸೇವಿಸುತ್ತಾರೆ. ಕೆಲವರು ತೂಕ ಇಳಿಸಿಕೊಳ್ಳಲು ಇವುಗಳನ್ನು ಸೇವಿಸುತ್ತಾರೆ. ಆದರೆ ಇವುಗಳು ತೂಕ ಇಳಿಸಿಕೊಳ್ಳಲು ಸಹಕಾರಿಯೇ? ಅಥವಾ ತೂಕವನ್ನು ಹೆಚ್ಚಿಸುತ್ತದೆಯೇ ಎಂಬುದನ್ನು ತಿಳಿದುಕೊಂಡು ಬಳಿಕ ಸೇವಿಸಿ.
ರೋಟಿ, ಚಪಾತಿ ಧಾನ್ಯಗಳಿಂದ ತಯಾರಿಸುವುದರಿಂದ ಇವುಗಳಲ್ಲಿ ಕ್ಯಾಲೋರಿ, ಪೌಷ್ಟಿಕಾಂಶಗಳು ಹೆಚ್ಚಾಗಿರುತ್ತದೆ. ಹಾಗೇ ತೂಕ ಇಳಿಸಲು ಸಹಕಾರಿಯಾಗುವಂತಹ ಫೈಬರ್, ಪ್ರೋಟೀನ್ ಹೆಚ್ಚಾಗಿರುತ್ತದೆ. ಹಾಗಾಗಿ ತೂಕ ಇಳಿಸುವವರು ರೋಟಿ, ಚಪಾತಿ ಸೇವಿಸುವುದಾದರೆ ಅದನ್ನು ಮಿತವಾಗಿ ಬಳಸಿ. ಇದರಿಂದ ತೂಕ ಇಳಿಸಬಹುದು. ಒಂದು ವೇಳೆ ಇದನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೇವಿಸಿದರೆ ತೂಕ ಹೆಚ್ಚಾಗುವುದು ಖಂಡಿತ.
ಹಾಗೇ ರೋಟಿ, ಚಪಾತಿಯನ್ನು ಸಂಪೂರ್ಣ ಗೋಧಿಯಿಂದ ಮಾಡಿರಬೇಕು ಹಾಗೂ ಕಡಿಮೆ ಎಣ್ಣೆ, ಅಥವಾ ಎಣ್ಣೆ ಬಳಸದೆ ತಯಾರಿಸಿ ತಿನ್ನುವಂತೆ ತಜ್ಞರು ಸಲಹೆ ನೀಡುತ್ತಾರೆ.